ಆಗಸ್ಟ್ 16ಕ್ಕೆ‘ಲವ್‍ ಮಾಕ್ಟೆಲ್’ ಬಿಡುಗಡೆ!

ಕರೋನಾ ಲಾಕ್‍ಡೌನ್ ಟೈಂನಲ್ಲಿ ಓಟಿಟಿಯಲ್ಲಿ ಅತಿಹೆಚ್ಚು ವೀಕ್ಷಣೆಗೊಂಡ ಚಿತ್ರ ಎಂದರೆ ಲವ್ ಮಾಕ್ಟೇಲ್, ಈ ಚಿತ್ರ ತೆಲುಗು, ತಮಿಳಿಗೆ ರೀಮೇಕ್ ಆಗುವುದಕ್ಕೂ ಇದು ಕಾರಣವಾಯಿತು. ಆದರೆ ಚಿತ್ರವು ಥಿಯೇಟರನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗಲೇ ಲಾಕ್‍ಡೌನ್ ಆಗಿ ಚಿತ್ರಪ್ರದರ್ಶನ ಸ್ಥಗಿತಗೊಂಡಿತ್ತು.

ಈಗ ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನು ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಚಿತ್ರವನ್ನು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಜಿಸಿದೆ.

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಅಭಿನಯದ ಸೂಪರ್‍ಹಿಟ್ ಚಿತ್ರ ಲವ್‍ಮೋಕ್ಟ ಅಕ್ಟೋಬರ್ 16ರಂದು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದಿ-ನಿಧಿಯ ಪ್ರೇಮ್‍ಕಹಾನಿ ಮತ್ತೊಮ್ಮೆ ದೊಡ್ಡಪರದೆಯ ಮೇಲೆ ಅನಾವರಣಗೊಳ್ಳಲಿದೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಚಿತ್ರತಂಡ ಬಿಡುಗಡೆಯ ವಿಷಯವನ್ನು ಹೇಳಿಕೊಂಡಿದೆ.

ನಿರ್ದೇಶಕ ಡಾರ್ಲಿಂಗ್ ಕೃಷ್ಣ, ನಾಯಕಿ ಮಿಲನ ನಾಗರಾಜ್, ವಿತರಕ ಜಾಕ್ ಮಂಜು ಇಲ್ಲಿ ಮಾತನಾಡಿದ್ದಾರೆ. ಕಳೆದ ಜನವರಿ 31ರಂದು ಲವ್‍ಮೋಕ್ಟೆಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಉತ್ತಮ ವಿಮರ್ಶೆಗಳು ಕೂಡ ಈ ಸಿನಿಮಾಕ್ಕೆ ಬಂದಿತ್ತು. ಸಿನಿಮಾ ಸಾಧಾರಣ ಹಿಟ್ ಆಗಿತ್ತು. ಆದರೆ ಆನಂತರ ಕರೋನಾ ಲಾಕ್ಡೌನ್ ಆದಕಾರಣ ಲವ್‍ಮಾಕ್ಟೆಲ್ ಚಿತ್ರ ಹೆಚ್ಚುಕಾಲ ಚಿತ್ರಮಂದಿರದಲ್ಲಿರಲಾಗಲಿಲ್ಲ.

ನಂತರ ಲವ್‍ಮಾಕ್ಟೆಲ್ ಚಿತ್ರವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಯಿತು. ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾವನ್ನು ಲಕ್ಷಾಂತರ ಜನ ನೋಡಿ ಮೆಚ್ಚಿಕೊಂಡಿದ್ದರು. ವಿದೇಶಗಳಿಂದಲೂ ನಿರ್ದೇಶಕರಿಗೆ ಮೆಚ್ಚುಗೆಯ ಕರೆಗಳು ಬಂದವು. ಸಿನಿಮಾವನ್ನು ಮರುಬಿಡುಗಡೆ ಮಾಡುವಂತೆ ಆಗಲೇ ಒತ್ತಾಯ ಬಂದಿತ್ತು. ಅದರಂತೆ ಈಗ ಲವ್‍ಮೋಕ್ಟೆಲ್ ಚಿತ್ರ ಮರುಬಿಡುಗಡೆಯಾಗುತ್ತಿದೆ. ಆಗ ನೋಡದಿದ್ದವರು ಮತ್ತೊಮ್ಮೆ ಚಿತ್ರ ವೀಕ್ಷಿಸುವ ಅವಕಾಶವನ್ನು ನಿರ್ದೇಶಕ ಕೃಷ್ಣ ಹಾಗೂ ವಿತರಕ ಜಾಕ್ ಮಂಜು ಅವರು ಮಾಡಿಕೊಟ್ಟಿದ್ದಾರೆ.

ಚಿತ್ರಮಂದಿರಗಳಲ್ಲಿ 50% ಪ್ರೇಜ್ಞಾಕರಿಗೆ ಮಾತ್ರವೇ ಅವಕಾಶ ಕೊಟ್ಟಿರುವ ಕಾರಣ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಈಗಾಗಲೇ ಹಿಟ್ ಆಗಿರುವ, ಅಥವಾ ಲಾಕ್ಡೌನ್‍ಗೆ ಮುಂಚೆ ಬಿಡುಗಡೆಯಾದ ಸಿನಿಮಾಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲಿ ಚಿರು ಸರ್ಜಾ ಅಭಿನಯದ ಶಿವಾರ್ಜುನವೂ ಇದೆ.

This Article Has 1 Comment
  1. Pingback: DevSecOps Solutions

Leave a Reply

Your email address will not be published. Required fields are marked *

Translate »
error: Content is protected !!