ಆ.1ರಿಂದ ತಮಿಳಿನಲ್ಲಿ ಮಾಸ್ಟರ್ ಚೆಫ್ ಕಾರ್ಯಕ್ರಮ

ಅಂತಾರಾಷ್ಟ್ರೀಯ ಖ್ಯಾತಿಯ ಕುಕ್ಕಿಂಗ್ ಶೋ “ಮಾಸ್ಟರ್ ಚೆಫ್” ಆಗಸ್ಟ್ 1ರಿಂದ ಪ್ರತೀ ಶನಿವಾರ ಹಾಗೂ ಭಾನುವಾರ ರಾತ್ರಿ 9.30 ಗಂಟೆಗೆ ಸನ್ ಟಿವಿ ಯಲ್ಲಿ ಪ್ರಸಾರ ಆಗಲಿದೆ.

ಇನ್ನೋವೆಟಿವ್ ಫಿಲಂ ಅಕಾಡೆಮಿ ಈ ಸಂಬಂಧ ಮಾಹಿತಿ ನೀಡಿದ್ದು, ಖ್ಯಾತ ನಟ ವಿಜಯ್ ಸೇತುಪತಿ ಅವರು ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ ಎಂದು ತಿಳಿಸಿದೆ.

ಇನ್ನೋವೇಟಿವ್ ಫಿಲಂ ಅಕಾಡೆಮಿ ಸಂಸ್ಥಾಪಕ ಶರವಣ ಪ್ರಸಾದ್, ” ಪ್ರಾದೇಶಿಕ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಪ್ರಖ್ಯಾತಿಯ ಅಡುಗೆ ಶೋವನ್ನು ಪ್ರಸ್ತುತಪಡಿಸಲು ಸಂತಸವಾಗುತ್ತಿದೆ. ಮಾಸ್ಟರ್ ಚೆಫ್ ಇಂಟರ್ನ್ಯಾಷನಲ್ ಫಾರ್ಮೇಟ್ ನ್ನು ಪ್ರಾದೇಶಿಕ ಸೊಗಡಿಗೆ ಧಕ್ಕೆ ತರದಂತೆ ಆಯೋಜನೆ ಮಾಡಲಾಗುತ್ತಿದೆ.

ವಿಜಯ್ ಸೇತುಪತಿ ಅವರು ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದು ವೀಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ. ಈ ಕಾರ್ಯಕ್ರಮ ತಮಿಳಿನಲ್ಲಿ ಸೂಪರ್ ಹಿಟ್ ಆಗುವ ಭರವಸೆ ಇದೆ” ಎಂದು ಹೇಳಿದ್ದಾರೆ. ನಟ , ಕಾರ್ಯಕ್ರಮದ ಹೋಸ್ಟ್ ವಿಜಯ್ ಸೇತುಪತಿ, “ಈ ರೀತಿಯ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವುದು ನನ್ನ ವೃತ್ತಿ ಜೀವನದಲ್ಲಿ ಅವಿಸ್ಮರಣೀಯ ವಿಷಯವಾಗಿದೆ. ಇದು ತಮಿಳು ಭಾಷೆಯಲ್ಲಿ ಅತ್ಯುತ್ತಮ ಅಡುಗೆ ಕಾರ್ಯಕ್ರಮವಾಗಿ ದಾಖಲಾಗಲಿದೆ ಎನ್ನುವ ವಿಶ್ವಾಸವಿದೆ. ನಮ್ಮ ಇಡೀ ತಂಡ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುವ ನಿಟ್ಟಿನಲ್ಲಿ ಶ್ರಮಿಸಿದೆ” ಎಂದು ಹೇಳಿದ್ದಾರೆ.

ಎಂಡೆ ಮೋಲ್ ಶೈನ್ ಜೊತೆಗೂಡಿ ಇನ್ನೋವೆಟಿವ್ ಫಿಲಂ ಅಕಾಡೆಮಿ ಮಾಸ್ಟರ್ ಚೆಫ್ ಕಾರ್ಯಕ್ರಮವನ್ನು ನಿರ್ಮಿಸುತ್ತಿದೆ. ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧಿಗಳು ತಮ್ಮ ಅಡುಗೆ ಕೌಶಲ್ಯವನ್ನು ಪ್ರಸ್ತುತಪಡಿಸಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!