Athi I Love You movie review : ಒಂದು ಸಂಸಾರದ ಕಥೆ ‘ ಅಥಿ ಐ ಲವ್ ಯು ‘

ಚಿತ್ರ: ಅಥಿ ಐ ಲವ್ ಯು

ನಿರ್ದೇಶನ: ಲೋಕೇಂದ್ರ ಸೂರ್ಯ
ನಿರ್ಮಾಣ: ರೆಡ್ ಆಂಡ್ ವೈಟ್ ಸವೆನ್ ರಾಜ್
ತಾರಾಗಣ: ಲೋಕೇಂದ್ರ ಸೂರ್ಯ, ಸಾತ್ವಿಕಾ ( ಶ್ರಾವ್ಯ ರಾವ್)

ರೇಟಿಂಗ್: 4/5

ಯುವ ದಂಪತಿಗಳು ಯಾವ ರೀತಿ ಇರಬೇಕು ಎನ್ನುವ ಒನ್ ಲೈನ್ ಕಥೆಯಾಗಿ ತೆರೆಯ ಮೇಲೆ ಬಂದಿರುವ ಚಿತ್ರ ‘ ಅಥಿ ಐ ಲವ್ ಯು ‘.

ಗಂಡನ ಜೊತೆ ಯಾವ ರೀತಿ ಇರಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲದ ಅಥಿರಾ ಹಾಗೂ ಆಕೆಯ ಗಂಡ ವಸಂತ್ ನಡುವೆ ಮದುವೆಯಾಗಿ ನಾಲ್ಕು ವರ್ಷ ಆದರೂ ಸರಿಯಾದ ಹೊಂದಾಣಿಕೆ ಇರುವುದಿಲ್ಲ. ಅಥಿರಾ ತಾಯಿ ಕೂಡಾ ಮಗಳು ಗಂಡನ ಜೊತೆ ಯಾವ ರೀತಿ ವರ್ತಿಸಬೇಕು ಎಂದು ಹೇಳಿಕೊಡುವುದಿಲ್ಲ. ಬದಲಿಗೆ ಬುದ್ಧಿ ಹಾಳು ಮಾಡುತ್ತಾಳೆ. ಸ್ನೇಹಿತೆ ಗಂಡಸರ ಬಗ್ಗೆ ಕೆಟ್ಟ ಭಾವನೆ ತುಂಬುತ್ತಾಳೆ. ಇದರಿಂದ ಇಬ್ಬರ ನಡುವೆ ಮನಸ್ತಾಪಗಳು ಉಂಟಾಗುತ್ತವೆ. ಕೊನೆಗೆ ಇಗೋವನ್ನು ಬದಿಗಿಟ್ಟು ವಸಂತ್ ತನ್ನ ಪತ್ನಿಯ ಜೊತೆ ಹೇಗೆ ಸಂಸಾರದಲ್ಲಿ ಸರಿಗಮ ಹಾಡುವಲ್ಲಿ ಯಶಸ್ವಿಯಾದ ಎನ್ನುವುದು ಚಿತ್ರದ ಕಥೆಯಾಗಿದೆ.

ಲೋಕೇಂದ್ರ ಸೂರ್ಯ ಅವರು ನಾಯಕ ನಟನಾಗಿ ನಟಿಸುವ ಜೊತೆಗೆ ಸಿನಿಮಾ ರಚನೆ ಹಾಗೂ ಛಾಯಾಗ್ರಹಣದಲ್ಲಿ ಕೆಲಸ ಮಾಡಿದ್ದಾರೆ. ಅವರು ಗಂಡನ ಪಾತ್ರದಲ್ಲಿ ಗಮನ ಸೆಳೆಯುವಂತೆ ನಡೆಸಿದ್ದಾರೆ. ಪತ್ನಿಯ ಪಾತ್ರದಲ್ಲಿ ನಟಿಸಿರುವ ಸಾತ್ವಿಕಾ ( ಶ್ರಾವ್ಯ ರಾವ್) ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ನೆರೆಹೊರೆಯ ವ್ಯಕ್ತಿಯ ಪಾತ್ರದಲ್ಲಿ ನಟಿಸಿರುವ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಗಮನ ಸೆಳೆಯುತ್ತಾರೆ.

ಅನಂತ್ ಆರ್ಯನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಛಾಯಾಗ್ರಹಣ ಸುಂದರವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ದಂಪತಿಗಳು ಅನೋನ್ಯವಾಗಿ ಯಾವ ರೀತಿ ಇರಬೇಕು ಎಂದು ಇಂದಿನ ಸಮಾಜಕ್ಕೆ ಅಗತ್ಯವಾದ ತುರ್ತು ಸಂದೇಶ ನೀಡುವ ಚಿತ್ರವಾಗಿ ಅಥಿ ಐ ಲವ್ ಯು ಗಮನ ಸೆಳೆಯುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!