ಮಾಜಿ ಪ್ರಧಾನಿ ದಿವಂಗರ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಚಿತ್ರದ ಶೂಟಿಂಗ್ ಆರಂಭಗೊಂಡಿದೆ.
ಈ ಚಿತ್ರ ಭಾರತದ ನಾಯಕ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ರಾಜಕೀಯ ವೃತ್ತಿಜೀವನದ ಸುತ್ತ ಇರಲಿದೆ. ಮುಂಬೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿಸಲಾಗಿದೆ. ಮುಂಬೈ ಮತ್ತು ಲಕ್ನೋದಂತಹ ವಿವಿಧ ಭಾಗಗಳಲ್ಲಿ 45ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಡೆಸುವ ಯೋಜನೆ ಹೊಂದಲಾಗಿದೆ.
ಪಂಕಜ್ ತ್ರಿಪಾಠಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಮಾಡುತ್ತಿದ್ದಾರೆ.
ನಾವು ಚಿತ್ರದ ಬಗ್ಗೆ ಸ್ಟಡಿ ಮಾಡಲು ಸಮಯ ತೆಗೆದುಕೊಂಡೆವು. ಆಡುಭಾಷೆ, ಅವರ ಜೀವನಶೈಲಿ ಮತ್ತು ಅವರ ಬಗ್ಗೆ ಭಾರತದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಯಿತು. ಇಂದು ಮೇ ಅಟಲ್ ಹೂ ಶೂಟಿಂಗ್ ಆರಂಭಿಸಿದ್ದೇವೆ ಎಂದು ನಟ ಪಂಕಜ್ ತ್ರಿಪಾಠಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ನಿರ್ದೇಶಕ ರವಿ ಜಾಧವ್ ಅವರು, ಅಟಲ್ ಜಿ ಅವರು ತಮ್ಮ ಜೀವನ ಮತ್ತು ನಮ್ಮ ದೇಶಕ್ಕಾಗಿ ಮಾಡಿದ ಮ್ಯಾಜಿಕ್ ಅನ್ನು ನಮ್ಮ ಚಲನಚಿತ್ರದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಿರ್ಮಾಪಕ ವಿನೋದ್ ಭಾನುಶಾಲಿ ಅವರು, ಮೇ ಅಟಲ್ ಹೂನ್ ಒಂದು ವಿಶೇಷ ಚಿತ್ರ. ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೂ ನಮ್ಮ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲು ಬಹಳ ಪ್ರಯತ್ನ ಹಾಕುತ್ತಿದ್ದಾರೆ ಎಂದಿದ್ದಾರೆ.
—–
Be the first to comment