ಗಿಲ್ಲಿಗೆ ಹೊಡೆದ ರಿಷಾ ‘ಔಟ್’?

ಬಿಗ್ ಬಾಸ್ ಸೀಸನ್ 12ರ  ಸ್ಪರ್ಧಿಗಳಾದ ರಿಷಾ ಗೌಡ ಹಾಗೂ ಗಿಲ್ಲಿ ನಡುವೆ ದೊಡ್ಡ ಜಗಳ ನಡೆದಿದ್ದು,  ರಿಷಾ ಗೌಡ ಗಿಲ್ಲಿಗೆ ಹೊಡೆದಿದ್ದಾರೆ. ಬಿಗ್ ಬಾಸ್ ಈ ಬಗ್ಗೆ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ದೃಶ್ಯವಿದೆ. ಬಾತ್​ರೂಂನಲ್ಲಿ ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಗಿಲ್ಲಿ ಅವರು ಮನವಿ ಮಾಡಿದ್ದಾರೆ. ಆದರೆ  ರಿಷಾ ಇದಕ್ಕೆ ಬಗ್ಗಲಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು  ಗಿಲ್ಲಿ, ರಿಷಾ ಅವರ ಬಟ್ಟೆಯನ್ನು ಬಾತ್​ರೂಂ ಹೊರ ಭಾಗದಲ್ಲಿರುವ ನೆಲದ ಮೇಲೆ ಹಾಕಿದ್ದಾರೆ. ಇದು ರಿಷಾ ಕೋಪಕ್ಕೆ ಕಾರಣ ಆಗಿದೆ. ‘ಗಿಲ್ಲಿ’ ಎಂದು ಕೂಗುತ್ತಾ ಬಂದ ರಿಷಾ ಗೌಡ, ಗಿಲ್ಲಿಗೆ ಹೊಡೆದಿದ್ದಾರೆ.
‘ಹಲ್ಲೆ ಮಾಡಬಾರದು’ ಎಂಬುದು ಬಿಗ್ ಬಾಸ್​ ನಿಯಮಗಳಲ್ಲಿ ಒಂದು. ಈ ರೀತಿ ಮಾಡಿದರೆ  ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಈ ಹಿಂದಿನ ಅನೇಕ ಆವೃತ್ತಿಗಳಲ್ಲಿ ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ಕಳೆದ ಸೀಸನ್​ನಲ್ಲಿ ರಂಜಿತ್ ಅವರು ಇದೇ ರೀತಿ ವಕೀಲ ಜಗದೀಶ್ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹೋಗಿದ್ದರು. ಈಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದಾರೆ.
ರಿಷಾ ಗೌಡ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕು ಎಂದು  ಕೆಲ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಲ್ಲೆ  ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
—-
Be the first to comment

Leave a Reply

Your email address will not be published. Required fields are marked *

Translate »
error: Content is protected !!