ಆಸ್ಕರ್ ನಿರ್ದೇಶನದ “ಮನಸಿನ ಮರೆಯಲಿ”
ಆಸ್ಕರ್ ಕೃಷ್ಣ ಅವರ ನಿರ್ದೇಶನದ ಮನಸಿನ ಮರೆಯಲಿ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಭಾ.ಮ ಹರೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜು ಹಾಗೂ ಶಬೀನಾ ಅರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಂ.ಎಸ್.ತ್ಯಾಗರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಶೋರ್ ಯಾದವ್ ಹಾಗೂ ದಿವ್ಯಗೌಡ ಈ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಆಸ್ಕರ್ ಕೃಷ್ಣ ಇದು ನನ್ನ ಪಸ್ಟ್ ರೋಮ್ಯಾಂಟಿಕ್ ಲವ್ ಸ್ಟೋರಿ ಆರಂಭದಲ್ಲಿ ನಾನು ಆಸ್ಕರ್ ಎಂಬ ವಿಭಿನ್ನ ಕಥಾ ಹಂದರವುಳ್ಳ ಚಿತ್ರವನ್ನು ಮಾಡಿದ್ದೆ. ನನ್ನ ಪ್ರಯತ್ನವನ್ನು ಎಲ್ಲರೂ ಮೆಚ್ಚಿದರು. ಆದರೆ ಜನ ಥಿಯೇಟರ್‍ಗೆ ಬರಲಿಲ್ಲ. ಆದಾದ ಮೇಲೆ ಮಿಸ್ ಮಲ್ಲಿಗೆ ಹಾಗೂ “ಮೊನಿಕಾ ಈಸ್ ಮಿಸ್ಸಿಂಗ್” ಎಂಬ ಗ್ಲಾಮರಸ್ ಶೈಲಿಯ ಉತ್ತಮ ಚಿತ್ರಗಳನ್ನು ಮಾಡಿದೆ. ಅದಾದ ಮೇಲೆ ಮಾಡಿದ ಮ್ಯೂಸಿಕಲ್ ಲವ್ ಸ್ಟೋರಿ, ಮನಸಿನ ಮರೆಯಲಿ. ಈ ಥರಹದ ಸಿನಿಮಾ ಮಾಡಬೇಕೆಂದು ಮೊದಲಿನಿಂದಲೂ ಇತ್ತು. ಅದಕ್ಕೆ ಸರಿಯಾದ ನಿರ್ಮಾಪಕರು ಸಿಕ್ಕರು, ನಾಯಕ ಕಿಶೋರ್ ಸಿಕ್ಕರು. ಏಕ್‍ದುಜೆಕೇಲಿಯೆ ನನಗೆ ಬಹಳ ಸ್ಫೂರ್ತಿ ಕೊಟ್ಟಂತಹ ಚಿತ್ರ. ಅದರಲ್ಲಿದ್ದ ಹಾಗೆ ಈ ಚಿತ್ರದಲ್ಲೂ ಸಮುದ್ರ ತೀರ, ಮರಳು, ಪ್ರೇಮಿಗಳು ಇವಿಷ್ಟನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಈಗಾಗಲೇ ರೆಡಿಯಾಗಿದೆ. ಮುಂದಿನ ವಾರ ಸೆನ್ಸಾರ್ ಆಗಲಿದೆ. ಆಗಸ್ಟ್‍ನಲ್ಲಿ ಬಿಡುಗಡೆ ಪ್ಲಾನ್ ಇದೆ. ಇಂಥ ಚಿತ್ರಗಳಲ್ಲಿ ಮ್ಯೂಸಿಕ್ ತುಂಬಾ ಪ್ರಮುಕವಾಗಿರುತ್ತದೆ. ಮನಸ್ಸಿಗೆ ನಾಟುವಂತಿರಬೇಕು. ಸಿದ್ದಸೂತ್ರಗಳನ್ನು ಬಿಟ್ಟು ಈ ಸಿನಿಮ ಮಾಡಿದ್ದೇನೆ ಎಂದು ಹೇಳಿದರು.
ನಂತರ ನಿರ್ಮಾಪಕರಾದ ಲಿಂಗರಾಜು ಮಾತನಾಡಿ ಎಲ್ಲರ ಲೈಫ್‍ನಲ್ಲಿ ಒಂದು ಲವ್ ಸ್ಟೋರಿ ಇದ್ದೇ ಇರುತ್ತದೆ ಅಂತಹ ಒಂದು ಚಿತ್ರ ಮಾಡೋಣ ಎಂದು ನಾನು ಕಿಶೋರ ಮಾತನಾಡಿಕೊಂಡಿದ್ದೆವು. ಕೃಷ್ಣ ಅವರಲ್ಲಿ ಇದನ್ನು ಹೇಳಿದಾಗ ಅವರು ಈ ಕಥೆ ಮಾಡಿದ್ದರು. ಸಿನಿಮಾ ತುಂಬ ಚೆನ್ನಾಗಿ ಬಂದಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ತ್ಯಾಗರಾಜ್ ಮಾತನಾಡಿ ಹಾಡುಗಳ ಮೂಲಕವೇ ಸಿನಿಮಾನ ಹೇಗೆ ತೋರಿಸಬಹುದು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿದೆ. ನನ್ನ ಸಂಗೀತದಲ್ಲಿ ಹೊರ ಬರುತ್ತಿರುವ ಐದನೇ ಸಿನಿಮಾ ಇದು. ಈ ಚಿತ್ರದಲ್ಲಿ ಮೊದಲ ಬಾರಿಗೆ ನಾನೂ ಕೂಡ ಒಂದು ಹಾಡನ್ನು ಹಾಡಿದ್ದೇನೆ ಎಂದು ಹೇಳಿದರು.
ನಂತರ ಚಿತ್ರದ ನಾಯಕಿ ದಿವ್ಯಗೌಡ ಮಾತನಾಡಿ ನನ್ನ ಸ್ನೇಹಿತರೆಲ್ಲ ಹಾಡುಗಳನ್ನು ಕೇಳಿ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಹಾಡುಗಳು ಅವರಿಗೆ ತುಂಬಾ ಹಿಡಿಸಿಬಿಟ್ಟಿದೆ. ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೋ ಅದೇ ತರಹದ ಒಬ್ಬ ನಾರ್ಮಲ್ ಹುಡುಗಿ ಪಾತ್ರ ನನ್ನದು. ಈಗಾಗಲೇ ಸೀರಿಯಲ್‍ಗಳಲ್ಲಿ ಅಭಿನಯಿಸಿದ್ದರಿಂದ ಆಕ್ಟಿಂಗ್ ಕಷ್ಟ ಎನಿಸಲಿಲ್ಲ ಎಂದು ತನ್ನ ಅನುಭವಗಳನ್ನು ಹೇಳಿಕೊಂಡರು.
ನಾಯಕ ಕಿಶೋರ್ ಮಾತನಾಡುತ್ತ ಒಂದು ಒಳ್ಳೆಯ ಲವ್‍ಸ್ಟೋರಿ ಆಗಬೇಕೆಂದರೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿರಬೇಕು. ಅದರಲ್ಲಿ ನಮ್ಮ ಚಿತ್ರ ಗೆದ್ದಿದೆ. ಎಲ್ಲಾ ತರಹದ ಎಲಿಮೆಂಟ್ಸ್ ಇರುವ ಚಿತ್ರ. ನನ್ನದು ಈ ಚಿತ್ರದಲ್ಲಿ ಒಬ್ಬ ಲೋಕಲ್ ಹುಡುಗನ ಪಾತ್ರ. ಲವ್ ಬಗ್ಗೆ ಆತನಿಗಿದ್ದ ಅಭಿಪ್ರಾಯವೇನು, ಕೊನೆಗೆ ಆತನಿಗೆ ಹೇಗೆ ರಿಯಲೈಸ್ ಆಯ್ತು ಅಂಥ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಹೇಳಿದರು. ಆನಂದ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಹೊರಬಂದಿದ್ದು ಶ್ಯಾಮ್ ಕೂಡ ಹಾಜರಿದ್ದು ಮಾತನಾಡಿದರು. ಪ್ರೇಮಿಗಳ ಮಧ್ಯೆ ಸಣ್ಣ ಇಗೋ ಬಂದಾಗ ಅವರಲ್ಲಿ ಹೇಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ ಎಂದು ಈ ಚಿತ್ರದಲ್ಲಿ ನಿರ್ದೇಶಕ ಆಸ್ಕರ್ ಕೃಷ್ಣ ಹೇಳಿದ್ದಾರೆ.
Be the first to comment