ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿಗೂ, ನನಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ. ವೋಟ್ ಸಂಖ್ಯೆ ಹೊರ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಕುರಿತಂತೆ 2ನೇ ರನ್ನರ್ ಅಪ್ ಅಶ್ವಿನಿ ಗೌಡ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಡವ ಎಂಬ ಟ್ರಂಪ್ ಕಾರ್ಡ್ ಬಳಸಿ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಶ್ವಿನಿ ಗೌಡ ಅವರು ರಕ್ಷಿತಾ ಎಸ್ ಕ್ಯಾಟಗರಿಗೆ ಸೇರಿದವಳು ಎಂದು ಹೇಳಿದ್ದರು. ಎಸ್ ಕ್ಯಾಟಗರಿ ಅಂದರೆ ಏನು ಎಂದು ವ್ಯಾಪಕ ಚರ್ಚೆ ನಡೆದಿತ್ತು. ಒಂದು ಸಮುದಾಯದ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು.
ಎಸ್ ಅಂದರೆ ಶೌಟಿಂಗ್ ಎಂದರ್ಥ. ಕೂಗಾಡ್ತಾರೆ, ಕಿರುಚಾಡಿ ಸ್ಕೋಪ್ ತಗೊಳ್ತಾರೆ ಎನ್ನುವವರಿಗೆ ಶೌಟಿಂಗ್ ಕ್ಯಾಟಗರಿ ಎಂದು ಹೇಳುತ್ತಾರೆ. ರಕ್ಷಿತಾ ಶೆಟ್ಟಿ ಕೂಗಾಡುತ್ತಾರೆ. ಆ ವ್ಯಕ್ತಿ ನಾನಲ್ಲ. ಎಸ್ ಕ್ಯಾಟಗರಿ ಬಗ್ಗೆ ಜನರು ಈಗ ಮಾತನಾಡಿರೋದು ನೋಡಿ, ಸಿಲ್ಲಿ ಅನಿಸಿತು ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
‘ನಾನು ಕನ್ನಡ ಹೋರಾಟಗಾರ್ತಿ. ನಾನು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆ, ನನ್ನ ಕುಟುಂಬದವರು ವೋಟ್ ಹಾಕಿ ಎಂದು ಕೇಳಿದ್ದರಲ್ಲಿ ಯಾವುದು ತಪ್ಪಿಲ್ಲ. ಅವರು ಬೇರೆಯವರನ್ನು ಕೆಳಗಿಡಿ ಎಂದು ಹೇಳಿಲ್ಲ” ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಅಶ್ವಿನಿ ಪರ ವೋಟ್ ಕೇಳಿದಕ್ಕೆ ಸಮರ್ಥನೆ ನೀಡಿದ್ದಾರೆ.





Be the first to comment