ಗಾಂಧಿನಗರದಲ್ಲಿ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡು ಹಲವಾರು ಸಿನಿಮಾಗಳಿಗೆ ಬರಹಗಾರರಾಗಿ ಮತ್ತು ಸಂಭಾಷಣೆ ಬರೆದು ಈಗ ಪೂಣ ಪ್ರಮಾಣದ ನಿದೇನಕ್ಕೆ ಅಣಿಯಾಗಿದ್ದಾರೆ ಎ ಆರ್ ಸಾಯಿ ರಾಮ್
ಎಆರ್ ಸಾಯಿ ರಾಮ್
ತೂಮಕೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಬಿಬಿಎಂ ವಿದ್ಯಾಅಭ್ಯಾಸ ಮುಗಿಸಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ಅಭಿನಯ ಜೊತೆ ಸಿನಿಮಾ ಸ್ಕ್ರಿಪ್ಟ್ ಕೆಲಸಗಳನ್ನು ನಿಭಾಯಿಸುವ ಚಾಣಾಕ್ಷತೆಯನ್ನು ಬೆಳೆಸಿಕೊಂಡು ಅನೇಕ ಸಾಮಾಜಿಕ ನಾಟಕಗಳಲ್ಲಿಯೂ ಕೂಡ ಕೆಲಸ ನಿವಹಿಸಿದ್ದಾರೆ. ಇಷ್ಟೆಲ್ಲಾ ಕಲೆಯ ಗೀಳನ್ನೂ ಬೆಳಸಿಕೊಂಡಿರುವ ಸಾಯಿರಾಮ್ ಅವರು ಬಪಿ,ಗೂಳಿಹಟ್ಟಿ ,ಭುಜಂಗ್ ಚಿತ್ರಗಳಿಗೆ ಸಹಾಯಕ ನಿದೇಶಕರಾಗಿ ಕೆಲಸ ಮಾಡಿದ ಅನುಭವದಿಂತ ಸಂಕಲನಕಾರರಾಗಿ,ಸಂಭಾಷಣೆಕಾರರಾಗಿಯೂ ನನ್ನ ಮಗಳೇ ಹಿರೋಯಿನ್ ಮತ್ತು ಮನಸಿನ ಮರೆಯಲಿ’ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಕಳೆದ ಒಂದು ದಶಕದಲ್ಲಿ ಸುಮಾರು 15 ಚಿತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಏಳು ಬೇಳುಗಳ ಪರಿಶ್ರಮದಿಂದ ಇಂದು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನ ಬಡ್ತಿಯೊಂದಿಗೆ ಇಂದು ತನ್ನ ಚೊಚ್ಚಲ ನಿರ್ದೇಶನ “ಅಶ್ವ” ಚಿತ್ರದ ಮೂಲಕ , ಪರಿಣಿತರ ತಂತ್ರಜ್ಞರ ತಂಡದ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದ್ದು, ಉದಯೋನ್ಮುಖ ನಟ ಹೊಸ ಪ್ರತಿಭೆ “ವಿವಾನ್ ಕೆ ಕೆ” ಅಶ್ವ” ಚಿತ್ರದ ನಾಯಕ ಹಾಗೂ ಪ್ರಮುಖ ಪಾತ್ರದಲ್ಲಿ ನಾಗೇಂದ್ರ ಅರಸ್ , ಬಲರಾಜ್ವಾಡಿ, ಪವನ್ ಕುಮಾರ್(ಪಚ್ಚಿ), ,ಯಶ್ ಶೆಟ್ಟಿ ನಂದಗೋಪಾಲ್, ಸೂರಿ ಹಾಗೂ ಮತ್ತಿತರ ತಾರಾಬಳವಿದೆ.
ಚಿತ್ರದ ನಾಯಕಿಯರಾಗಿ ಸಾರಿಕಾ ಮತ್ತು ಸಾಗರಿಕ ಕಾಣಿಸಿಕೊಳ್ಳಲಿದ್ದಾರೆ .ಇನ್ನು ಬಿ.ಅಜನೀಶ್ ಲೋಕನಾಥ್ ರವರ ಸಂಗೀತ ಕಾಮಲ್ ಮಾಡಲಿದ್ದು , ರವಿಕುಮಾರ್ ಸನ ಅವರು ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಶ್ರೀಕಾಂತ ಗೌಡ ಸಂಕಲನ, ನೃತ್ಯ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು ಹಾಗೂ ತುಳಸಿ ರಾಮ್ ರಾಜ್ ಪ್ರಚಾರ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ.
Be the first to comment