ಕಿಶೋರ್ ಮೇಗಳಮನೆ ನಿರ್ದೇಶನ, ಅದಿತ್ಯ ಅಭಿನಯದ “ಕಾಂಗರೂ” ಚಿತ್ರವನ್ನು ನಿರ್ಮಿಸಿದ್ದ ಆರೋಹ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ನಿರ್ಮಾಣದ ಎರಡನೇ ಚಿತ್ರಕ್ಕೆ ಕಥೆ ಆಹ್ವಾನಿಸಿದೆ.
ಶಾಲಾ ಕಾಲೇಜು ದಿನದಲ್ಲಿ ಮಾಡಿದ ಮೋಜು ಮಸ್ತಿ ಬಗ್ಗೆ ಕಥೆ ಬರೆಯಬಹುದು. ಸ್ನೇಹಿತರ ಜೊತೆ ಸಂಭ್ರಮಿಸಿದ ಖುಷಿಯ ಕ್ಷಣ ಮತ್ತು ಮಾಡಿದ ಕಿರಿಕ್, ಹಳೆಯ ಲವ್ ಸ್ಟೋರಿಗಳ ಬಗ್ಗೆ ಮೂರು ಪುಟ ಮೀರದಂತೆ ಬರೆದು ಕಳುಹಿಸಬಹುದು. ಆಯ್ಕೆಯಾದ ಬರಹಕ್ಕೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು.
ದ್ವಿತೀಯ ಬಹುಮಾನ 50 ಸಾವಿರ ರೂ., ತೃತೀಯ ಬಹುಮಾನವಾಗಿ 10 ಬರಹಗಳಿಗೆ ತಲಾ 25 ಸಾವಿರ ರೂಪಾಯಿ ನೀಡಲಾಗುವುದು.
ಬರವಣಿಗೆ ಸ್ವಾರಸ್ಯಕರವಾಗಿ ಇರುವುದಕ್ಕೆ ಪ್ರಥಮ ಆದ್ಯತೆ. ಪೂರ್ತಿ ಕಥೆ ಬೇಕಾಗಿಲ್ಲ. ಕೆಲ ಸನ್ನಿವೇಶಗಳನ್ನು ವಿವರವಾಗಿ ಬರೆದು ಕಳುಹಿಸಬಹುದು.
ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿದವರ ಹೆಸರನ್ನು ಸಿನೆಮಾದ ಚಿತ್ರಕಥೆ ವಿಭಾಗದಲ್ಲಿ ಬಳಸಲಾಗುವುದು.
ಬರಹ 9844460128 ವಾಟ್ಸಾಪ್ ನಂಬರ್ ಗೆ ಕಳುಹಿಸಬಹುದು. kishore.megalamane@gmail.com ಇದಕ್ಕೆ ಮೇಲ್ ಮಾಡಬಹುದು.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಬರಹಗಾರರಿಗೆ ಕನ್ನಡದ ಸೂಪರ್ ಸ್ಟಾರ್ ನಟಿಸಲಿರುವ ಆರೋಹ ಪ್ರೊಡಕ್ಷನ್ ನಿರ್ಮಾಣದ ದ್ವಿತೀಯ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಕೊಡಲಾಗುವುದು.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕಿಶೋರ್ ಮೇಗಳಮನೆ,
(ಕಾಂಗರೂ ಚಿತ್ರದ
ನಿರ್ದೇಶಕರು),
ಮಾಸ್ತಿ, (ಕಥೆಗಾರ, ಸಂಭಾಷಣೆಗಾರ),
ಶಿವಮಣಿ,
(ಹಿರಿಯ ನಿರ್ದೇಶಕರು)
ಪೀಣ್ಯ ನಾಗರಾಜ್,
(ಪದೇ ಪದೇ ಚಿತ್ರದ ನಿರ್ದೇಶಕರು)
ಮಧುಸೂಧನ.
(ಆಪರೇಷನ್ ನಕ್ಷತ್ರ ಚಿತ್ರದ ನಿರ್ದೇಶಕರು)
ತೀರ್ಪುಗಾರರ ಮಂಡಳಿಯಲ್ಲಿರುತ್ತಾರೆ.
Be the first to comment