ಕನ್ನಡದ ಪ್ರತಿಭಾನ್ವಿತ ನಟಿ ಅರ್ಚನಾ ಕೊಟ್ಟಿಗೆ ಬುಧವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಬಿ ಆರ್ ಶರತ್ ಅವರನ್ನು ವಿವಾಹವಾದರು.
ಬುಧವಾರ ಬೆಳಿಗ್ಗೆ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್ ಮತ್ತು ಕ್ರಿಕೆಟ್ ಕ್ಷೇತ್ರದ ಪ್ರಮುಖರು ಭಾಗವಹಿಸಿ ನವದಂಪತಿಗೆ ಶುಭ ಕೋರಿದರು.ಕೆಲವು ತಿಂಗಳ ಹಿಂದಷ್ಟೇ ಅರ್ಚನಾ ಹಾಗೂ ಶರತ್ ಅವರ ನಿಶ್ಚಿತಾರ್ಥ ನೆರವೇರಿತ್ತು.
ಮಂಗಳವಾರ ನಡೆದ ಆರತಕ್ಷತೆ ಸಮಾರಂಭದಲ್ಲಿ ಆರ್‌ಸಿಬಿಯ ದೇವದತ್ ಪಡಿಕಲ್, ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್), ವೈಶಾಖ್ ವಿಜಯಕುಮಾರ್ (ಪಂಜಾಬ್ ಸೂಪರ್ ಕಿಂಗ್ಸ್) ಸೇರಿದಂತೆ ಹಲವಾರು ಕ್ರಿಕೆಟಿಗರು ಭಾಗವಹಿಸಿ ಕರ್ನಾಟಕ ತಂಡದ ಪರ ರಣಜಿ ಕ್ರಿಕೆಟ್ ಆಡುತ್ತಿರುವ ತಮ್ಮ ಸ್ನೇಹಿತ ಬಿ ಆರ್ ಶರತ್ ಅವರಿಗೆ ಶುಭ ಹಾರೈಸಿದರು.
ಕನ್ನಡ ಚಿತ್ರರಂಗದ ನಟಿಯರಾದ ಸಪ್ತಮಿ ಗೌಡ, ಅಮೃತಾ ಅಯ್ಯಂಗಾರ್, ಸಾನ್ಯಾ ಅಯ್ಯರ್, ಆಶಿಕಾ ರಂಗನಾಥ್, ಅರ್ಚನಾ ಜೋಯಿಸ್, ನವೀನ್ ಶಂಕರ್, ಹಿತಾ ಚಂದ್ರಶೇಖರ್, ಸಾನ್ವಿ ಸುದೀಪ್, ಅನುಷಾ, ಖುಷಿ ರವಿ, ತೇಜಸ್ವಿನಿ ಶರ್ಮಾ, ರೋಶಿನಿ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಶರತ್, ಅರ್ಚನಾ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗ ಸ್ನೇಹಿತರಾಗಿದ್ದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಡಿಯರ್ ಸತ್ಯ’, ‘ಫಾರೆಸ್ಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ.
—-

Be the first to comment