‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಡಿಯರ್ ಸತ್ಯ’, ‘ಫಾರೆಸ್ಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಪ್ರತಿಭಾನ್ವಿತ ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟಿಗ ಶರತ್ ಬಿ.ಆರ್ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ಶರತ್ ಬಿ.ಆರ್ ರಣಜಿ ಟ್ರೋಫಿಗಾಗಿ ಆಡಿದ್ದಾರೆ. ಕಳೆದ ವರ್ಷ ಗುಜರಾತ್ ಟೈಟಾನ್ ಮೂಲಕ ಐಪಿಎಲ್ ಗೂ ಪಾದಾರ್ಪಣೆ ಕೂಡ ಮಾಡಿದ್ದಾರೆ. ಅವರು ಇದೇ ತಿಂಗಳ ಏಪ್ರಿಲ್ 23ರಂದು ಅರ್ಚನಾ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ.
ಶರತ್, ಅರ್ಚನಾ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗ ಸ್ನೇಹಿತರಾಗಿದ್ದರು . ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದೆ. ತಮ್ಮ ಎಂಟು ವರ್ಷದ ಪ್ರೀತಿಗೆ ಅರ್ಚನಾ -ಶರತ್ ಮದುವೆಯ ಮೂರು ಗಂಟಿನ ನಂಟು ಬೆಳೆಸಲು ಹೊರಟಿದ್ದಾರೆ.
ಸಿನಿಮಾ ಹಾಗೂ ಕ್ರಿಕೆಟ್ ಗೆ ಅವಿನಾಭಾವ ನಂಟಿದೆ. ಕ್ರಿಕೆಟಿಗರಿಗೆ ನಟಿಯರ ಮೇಲೆ ಲವ್ ಆಗೋದು ಹೊಸತೇನಲ್ಲ. ಈಗ ಕನ್ನಡದ ಪ್ರತಿಭಾನ್ವಿತ ನಟಿ ಕ್ರಿಕೆಟಿಗನನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ.
—-

Be the first to comment