ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ನಿರ್ಮಾಪಕ ಮತ್ತು ಉದ್ಯಮಿ ಅರವಿಂದ್ ರೆಡ್ಡಿ, ನಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಅವರ ಬಳಿ ಯಾವುದೇ ಸಾಕ್ಷ್ಯವಿದ್ದರೆ ಸಾರ್ವಜನಿಕವಾಗಿ ನೀಡಲಿ. ನಟಿ ಇನ್ನೂ ಮೂವರಿಗೆ ಸಂಬಂಧದ ಹೆಸರಿನಲ್ಲಿ ಮೋಸ ಮಾಡಿದ್ದಾರಂತೆ. ಅವರನ್ನು ಮದುವೆಯಾಗುವುದಾಗಿ ಹೇಳಿ ನಂತರ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರಂತೆ. ಈ ಪ್ರಕ್ರಿಯೆ ನಿಲ್ಲಬೇಕು. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಪೊಲೀಸರಿಗೆ ಒಪ್ಪಿಸುತ್ತೇನೆ” ಎಂದಿದ್ದಾರೆ.
”ಎರಡು ವರ್ಷಗಳ ಹಿಂದೆ ನಮ್ಮ ಸಂಬಂಧ ಮುಗಿದಿದೆ. ಆ ನಂತರ ಯಾವುದೇ ಸಂಪರ್ಕವಿಲ್ಲ. ಆಗಸ್ಟ್ನಲ್ಲಿ ಅವರ ಮನೆಮಾಲೀಕರಿಗೂ, ಸ್ನೇಹಿತರ ಪತ್ನಿಗೂ ಪತ್ರ ಬರೆದಿದ್ದೇನೆ ಎಂದು ಹೇಳುತ್ತಿದ್ದಾರೆ. ಆ ಸಮಯದಲ್ಲಿ ನಾನು ಭಾರತದಲ್ಲೇ ಇರಲಿಲ್ಲ. ನಾನು ಬೆಂಗಳೂರಿಗೆ ಬಂದ ತಕ್ಷಣ ಬಂಧಿಸಲಾಯಿತು” ಎಂದು ಹೇಳಿದ್ದಾರೆ.
”2017ರಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ನಟಿಗೆ ಮನೆ ವ್ಯವಸ್ಥೆ, ಪ್ರಯಾಣ, ವೆಚ್ಚ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದೇನೆ. 2023ರ ಜೂನ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಮದುವೆಯೂ ಪ್ಲಾನ್ ಆಗಿತ್ತು. ಆದರೆ ಅವರ ಬೇಡಿಕೆಗಳು ಹೆಚ್ಚುತ್ತಾ ಬಂದವು. ಕಾರು ಸೇರಿದಂತೆ ಒಟ್ಟು 3.5 ಕೋಟಿ ₹ ಖರ್ಚಾಗಿದೆ. ಅವರ ವಿದೇಶ ಪ್ರವಾಸಗಳಿಗೆ 40–50 ಸಾವಿರ ಡಾಲರ್ ವೆಚ್ಚವಾಗಿದೆ. ಮಸಾಯಿ ಮಾರಾ ಮತ್ತು ಟಾಂಜೇನಿಯಾ ಪ್ರವಾಸಗಳಿಗೆ ಹೋಗಿದ್ದರು. ಈ ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸುತ್ತೇನೆ” ಎಂದಿದ್ದಾರೆ.
ನಟಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರ ತನಿಖೆ ಮುಂದುವರಿದಿದೆ.
—–





Be the first to comment