ಚಿತ್ರ: ಆರಾಮ್ ಅರವಿಂದ ಸ್ವಾಮಿ
ನಿರ್ದೇಶನ: ಅಭಿಷೇಕ್ ಶೆಟ್ಟಿ
ತಾರಾಗಣ: ಅನೀಶ್ ತೇಜೇಶ್ವರ್, ಮಿಲನ ಭರತ್, ರಿತಿಕ ಶ್ರೀನಿವಾಸ್ ಇತರರು
ರೇಟಿಂಗ್: 3.5
ಹಲವು ತಿರುವುಗಳ ಮೂಲಕ ಮನರಂಜನೆ ನೀಡುವ ನವಿರಾದ ಪ್ರೇಮ ಕಥೆ ಹೊಂದಿದ ಚಿತ್ರ ಆರಾಮ್ ಅರವಿಂದ ಸ್ವಾಮಿ
ಕಂಡವರ ದುಡ್ಡಲ್ಲಿ ಜಾಲಿ ಮಾಡಿ ಓಡಾಡುವ ನಾಯಕನ ಪಾತ್ರದಲ್ಲಿ ಅನೀಶ್ ತೇಜೇಶ್ವರ್ ಕಾಣಿಸಿಕೊಂಡಿದ್ದಾರೆ. ನಾಯಕನಿಗೆ ರಿಲೇಷನ್ಶಿಪ್ ಬೇರೆ ಇದೆ. ಆದರೆ ಅವನಿಗೆ ಸುಳ್ಳು ಹೇಳುತ್ತಾ ಬದುಕುವ ಚಾಳಿ. ಇದೇ ಮುಂದೆ ಗೆಳತಿಯೊಂದಿಗೆ ಜಗಳಕ್ಕೆ ಕಾರಣವಾಗುತ್ತದೆ. ಮುಂದೆ ಶ್ರೀಮಂತ ಮನೆಯ ಅಂಗವಿಕಲ ಹುಡುಗಿಯೊಂದಿಗೆ ನಾಯಕ ಮದುವೆಯಾಗುತ್ತಾನೆ. ಅನಂತರ ಅವನ ಬದುಕು ಏನಾಗುತ್ತದೆ? ಪ್ರೀತಿಸಿದ ಹುಡುಗಿಯ ಜೀವನ ಏನಾಗುತ್ತದೆ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡಬೇಕಿದೆ.
ಯುವ ನಟ ಅನೀಶ್ ತೇಜೇಶ್ವರ್ ಉತ್ತಮವಾಗಿ ನಟಿಸಿದ್ದಾರೆ. ಆಯ್ಕೆಯಾಗಿ ಮಿಲನ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪೋಷಕ ನಡೆಯಾಗಿ ರತಿಕ ಶ್ರೀನಿವಾಸ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶ್ರೀಕಾಂತ್ ಪ್ರಸನ್ನ ಮತ್ತು ಪ್ರಶಾಂತ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಪೂರಕವಾಗಿದೆ. ಉಮೇಶ್ ಅವರು ಸಂಕಲನಕಾರರಾಗಿ ಗಮನ ಸೆಳೆಯುತ್ತಾರೆ.
Be the first to comment