Hemanth Hegde: ಏಪ್ರಿಲ್ 7ಕ್ಕೆ ‘ನಮ್‌ ನಾಣಿ ಮದ್ವೆ ಪ್ರಸಂಗ’

ಹೇಮಂತ್‌ ಹೆಗ್ಡೆ ನಿರ್ದೇಶನದ “ನಮ್‌ ನಾಣಿ ಮದ್ವೆ ಪ್ರಸಂಗ’ ಏಪ್ರಿಲ್ 7ಕ್ಕೆ ಬಿಡುಗಡೆ ಆಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹೇಮಂತ್‌ ಹೆಗ್ಡೆ, “ಇದೊಂದು ಅಪ್ಪಟ ಮನರಂಜನೆಯ ಚಿತ್ರ. ಹಳ್ಳಿಯ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎನ್ನುವ ಈಗಿನ ಸಮಸ್ಯೆಯೊಂದನ್ನು ಇಟ್ಟುಕೊಂಡು ಹಾಸ್ಯಭರಿತವಾಗಿ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಫ್ಯಾಮಿಲಿ ಕುಳಿತು ನೋಡುವ ಈ ಸಿನಿಮಾದ ಕಥಾಹಂದರ ಉತ್ತರ ಕನ್ನಡ ಜಿಲ್ಲೆಯ ಹಿನ್ನಲೆಯಲ್ಲಿ ಸಾಗುತ್ತದೆ” ಎಂದಿದ್ದಾರೆ.

“ಶಿರಸಿ ಸುತ್ತಮುತ್ತ ಚಿತ್ರದ ಬಹುಭಾಗ ಚಿತ್ರೀಕರಣ ನಡೆಸಲಾಗಿದೆ. ಅಲ್ಲಿನ ಭಾಷಾ ಶೈಲಿ ಸಂಭಾಷಣೆಯಲ್ಲಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳನ್ನು ಶುರು ಮಾಡಿದ್ದು, ಸಿನಿಮಾ ಏಪ್ರಿಲ್‌ 7ಕ್ಕೆ ಬಿಡುಗಡೆಯಾಗಲಿದೆ” ಎಂದು ಮಾಹಿತಿ ನೀಡಿದ್ದಾರೆ.

ಚಿತ್ರವನ್ನು “ಎಸ್‌ವಿಎಂ ಪ್ರೂಡಕ್ಷನ್ಸ್‌’ ಬ್ಯಾನರಿನಲ್ಲಿ ಸಂದೀಪ ನಾಗರಾಜ್‌ ನಿರ್ಮಿಸಿದ್ದಾರೆ.

ಚಿತ್ರತಂಡ ಇತ್ತೀಚೆಗೆ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದೆ. ಹೇಮಂತ್‌ ಹೆಗ್ಡೆ ಬರೆದಿರುವ, ಹವ್ಯಕ ಕನ್ನಡ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ರವಿ ಮುರೂರು ಸಂಗೀತ ಸಂಯೋಜಿಸಿದ್ದಾರೆ.

ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್‌ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!