ಏಪ್ರಿಲ್ 4ಕ್ಕೆ ಶಿವಾಜಿ ನಿರ್ಮಾಣ, ನಟನೆ ಹಾಗೂ ನಿರ್ದೇಶನದ “ಬೆಂಕಿಯ ಬಲೆ ಪ್ರೀತಿಯ ಕೊಲೆ” ಬಿಡುಗಡೆ

“ಪರಚಂಡಿ”, “ಆಘಾತ್ ಹ್ಯಾಂಗರ್”, ” ಕುಚುಕು”, “ಅಲೆಕ್ಸಾ”, “ಕುಂಟೆಬಿಲ್ಲೆ”, ” ಫಾದರ್” ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಮೈಸೂರಿನ ಶಿವಾಜಿ ನಿರ್ಮಿಸಿ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರದು ನಿರ್ದೇಶಿಸಿ, ನಟಿಸಿರುವ “ಬೆಂಕಿಯ ಬಲೆ ಪ್ರೀತಿಯ ಕೊಲೆ” ಚಿತ್ರ ಇದೇ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ.

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಭಯಂಕರ ಕರೋನ ಲಾಕ್ ಡೌನ್ ನಂತರ ಬೆಂಗಳೂರಿನ ಕಲಾವಿದರ ಸಂಫದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವಿದು. ಅಷ್ಟೇ ಅಲ್ಲ. ರಾಷ್ಟ್ರದ ಹಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಕುಟುಂಬದವರು ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ವಿಶೇಷ. ಶಿವಾಜಿ‌ ಅವರು ಗುಜರಾತ್ ನ ಮೋದಿ ಅವರ ನಿವಾಸಕ್ಕೆ ತೆರಳಿದಾಗ ಈ ಚಿತ್ರದ ಬಗ್ಗೆ ವಿವರಿಸಿದ್ದರು. ಚಿತ್ರದ ಬಗ್ಗೆ ತಿಳಿದ ಮೋದಿ ಅವರ ಕುಟುಂಬದ ಚಿತ್ರಕ್ಕೆ ಯಶಸ್ಸನ್ನು ಹಾರೈಸಿದ್ದರು.

ಹೀಗೆ ಹಲವು ವಿಶೇಷಗಳಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವಾಜಿ, ಮಂಡ್ಯ ರಮೇಶ್. ಜಿ.ಬಿ ಸಿದ್ದೇ ಗೌಡ್ರು, ಧೀರಜ, ಮಹಾದೇವಮೂರ್ತಿ, ಶಿವಲಿಂಗೇಗೌಡ. ಮಲ್ಲಿಕಾರ್ಜುನ್, ನಿರಂಜನ್ ದೇಶಪ್ರೇಮಿ. ಸಲ್ಮಾನ್ ಲೋಕೇಶ್. ಮಿರ್ಲೆ ಮಂಜು. ವರ್ಣ ಸಿದ್ದರಾಜು ಪ್ರೀತಿ ಎಶಿಕಾ ಪವಿತ್ರ, ಸುಮ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!