Jemas : ಅಪ್ಪು ಧ್ವನಿಯಲ್ಲಿ ಜೇಮ್ಸ್ ರಿ ರಿಲೀಸ್

ಪವರ್ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಅಭಿನಯದ ‘ಜೇಮ್ಸ್’ ಚಿತ್ರ ಏ .22 ರಂದು ಪುನೀತ್ ಅವರ ಧ್ವನಿಯೊಂದಿಗೆ ರಿ ರಿಲೀಸ್ ಆಗಿ ಪ್ರದರ್ಶನ ಕಾಣಲಿದೆ.

ಚಿತ್ರಕ್ಕೆ ಅಪ್ಪು ಅವರ ಧ್ವನಿಯನ್ನೇ ಸೇರಿಸಲಾಗುತ್ತಿದೆ. ಸೌಂಡ್‌ ಇಂಜಿನಿಯರಿಂಗ್‌ ತಂತ್ರಜ್ಞಾನ ಬಳಸಿ, ಅಪ್ಪು ಒರಿಜಿನಲ್ ಧ್ವನಿಯನ್ನು ಚಿತ್ರಕ್ಕೆ ಸೇರಿಸಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ನಟರ ಧ್ವನಿಯನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್​​ ಇಂಜಿನಿಯರ್​ ಶ್ರೀನಿವಾಸ್​ರಾವ್​ ಅವರು ಕೊನೆಗೂ ‘ಜೇಮ್ಸ್​​’ ಚಿತ್ರದಲ್ಲಿ ಪುನೀತ್​ ಅವರ ಧ್ವನಿಯನ್ನು ರಿಕ್ರಿಯೇಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಿರ್ದೇಶಕ ಚೇತನ್‌ ಕುಮಾರ್‌ ಹೇಳಿದ್ದಾರೆ.

ಜೇಮ್ಸ್ ಚಿತ್ರದಲ್ಲಿ ಅಪ್ಪು ಸರ್ ಧ್ವನಿ ತರಲು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ತಾಂತ್ರಿಕ ಸಂಸ್ಥೆ ಒಂದಕ್ಕೆ ಇದರ ಕೆಲಸ ವಹಿಸಿದ್ದೆವು. ಮೂರು ವರ್ಷಗಳ ಪ್ರಯತ್ನದಲ್ಲಿ ಇದು ಈ ಸಂಸ್ಥೆಗೆ ಸಿಕ್ಕ ಮೊದಲ ಯಶಸ್ಸು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಚೇತನ್​ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಕಿಶೋರ್​ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಸಿನಿಮಾ ಕೆಲಸ ಬಾಕಿ ಇರುವಾಗಲೇ ಪುನೀತ್​ ರಾಜ್‌ ಕುಮಾರ್‌ ಮೃತಪಟ್ಟಿದ್ದರು. ಪುನೀತ್‌ ಪಾತ್ರಕ್ಕೆ ಶಿವರಾಜ್‌ ಕುಮಾರ್‌ ಧ್ವನಿ ನೀಡಿದ್ದರು. ಇದೀಗ ಮತ್ತೆ ಪುನೀತ್ ಧ್ವನಿಯ ಸಿನಿಮಾದ ಅಪ್‌ಡೇಟ್‌ ವರ್ಶನ್‌ ಬರಲಿದೆ.

ಜೇಮ್ಸ್‌ ಚಿತ್ರ ಏಪ್ರಿಲ್ 14ರಂದು ಸೋನಿ ಲೈವ್ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್, ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಚಿತ್ರ ಹಿಟ್ ಆಗಿದ್ದು, ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!