‘ಪವರ್ ಸ್ಟಾರ್’ ಪುನೀತ್ ರಾಜ್ ಕುಮಾರ್ ಹೀರೋ ಆಗಿ ಅಭಿನಯಿಸಿದ ಚೊಚ್ಚಲ ಸಿನಿಮಾ ‘ಅಪ್ಪು’ ಇಂದು ಮರು ಬಿಡುಗಡೆಯಾಗಿ ರಾಜ್ಯಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.
ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬ ಆಗಿದೆ. ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮೊದಲ ಚಿತ್ರ ‘ಅಪ್ಪು’ ಥಿಯೇಟರ್‌ಗಳಲ್ಲಿ ‘ ರೀ- ರೀಲಿಸ್’ ಆಗಿದೆ.
ಬೆಂಗಳೂರಿನ ‘ವಿರೇಶ್’ ಸೇರಿದಂತೆ ಹಲವು ಥಿಯೇಟರ್‌ಗಳಲ್ಲಿ ಬೆಳಗ್ಗೆ 6 ಘಂಟೆಯಿಂದ ‘ಅಪ್ಪು’ ಸಿನಿಮಾ ಶೋ ಆರಂಭ ಆಗಿದೆ. ಪುನೀತ್ ಫ್ಯಾನ್ಸ್ ಎಲ್ಲೆಡೆ ಸಂಭ್ರಮಿಸುತ್ತಿದ್ದಾರೆ. ಮುಂಜಾನೆಯೇ ಚಿತ್ರಮಂದಿರದ ಮುಂದೆ ಪುನೀತ್ ಪೋಸ್ಟರ್ಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಹಲವು ಬಗೆಯ ಜೈಕಾರ ಕೂಗಲಾಗುತ್ತಿದೆ. ಅಭಿಮಾನಿಗಳು ‘ಅಪ್ಪು’ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಯುವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮುಂತಾದವರು ಅಭಿಮಾನಿಗಳ ಜೊತೆ ಸೇರಿ ಸಂಭ್ರಮಿಸಿದ್ದಾರೆ. ಇಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಹಾಗಾಗಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ.
ಪುನೀತ್ ರಾಜ್ಕುಮಾರ್, ರಕ್ಷಿತಾ, ಅವಿನಾಶ್ ಮುಂತಾದವರು ನಟಿಸಿದ ‘ಅಪ್ಪು’ ಸಿನಿಮಾ ತೆರೆಕಂಡು 23 ವರ್ಷಗಳು ಆಗಿವೆ. ಪುನೀತ್ ಅವರ ಅಭಿಮಾನಿಗಳು ಹಬ್ಬದ ರೀತಿ ಅಪ್ಪು ಸಿನಿಮಾದ ಮರು ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ.
—-

Be the first to comment