ಪ್ರಾಣಿಗಳ ಬೇಟೆ ಕುರಿತ ಅನಿಮೇಶನ್ ಚಿತ್ರ ಅಪ್ಪು ಏಪ್ರಿಲ್ 19ರಂದು ತೆರೆಗೆ ಬರಲಿದೆ.
ಅಪ್ಪು ಹೆಸರಿನ ಮರಿಯಾನೆಯ ಕಥೆಯನ್ನು ಚಿತ್ರ ಹೊಂದಿದೆ. ಬೇಟೆಗಾರರು ಅಪ್ಪುವಿನ ತಾಯಿಯನ್ನು ಕೊಂದು, ಅಪ್ಪನನ್ನು ತಮ್ಮ ಜೊತೆಗೆ ಕರೆದೊಯ್ಯುತ್ತಾರೆ. ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿಕೊಳ್ಳಲು ಅಪ್ಪು ಮಾಡುವ ಪ್ರಯತ್ನಗಳು ಸಿನಿಮಾದಲ್ಲಿದೆ.
3ಡಿ ಅನಿಮೇಷನ್ ಚಿತ್ರ ಏಪ್ರಿಲ್ 19 ರಂದು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ತೆರೆಗೆ ಬರಲಿದೆ. ಅಪ್ಪು ಹೆಸರಿನ ಆನೆಯ ಅನಿಮೇಷನ್ ಪಾತ್ರ ಈಗಾಗಲೇ ಮಕ್ಕಳ ಮನಸ್ಸನ್ನು ಗೆದ್ದಿದೆ.
ಆನೆಗಳ ಬೇಟೆ ನಮ್ಮ ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಚಿತ್ರದ ಮೂಲಕ ಆನೆ ಬೇಟೆ ಮಾಡದಂತೆ ಜಾಗೃತಿ ಮೂಡಿಸುವ ಯತ್ನ ಮಾಡಲಾಗುತ್ತಿದೆ ಎಂದು ಅಪ್ಪು ಸರಣಿಯ ನಿರ್ದೇಶಕ ಸಂಜಯ್ ರಹೇಜ ಅವರು ಹೇಳಿದ್ದಾರೆ. 
ಅಪ್ಪು ಚಿತ್ರವನ್ನು ಪ್ರಸೇಂಜಿತ್ ಗಂಗೂಲಿ, ಅಜಯ್ ವೇಲು ಮತ್ತು ಅರ್ಚಿಸ್ಮನ್ ಕರ್ ಅವರು ನಿರ್ದೇಶನ ಮಾಡಿದ್ದಾರೆ. ಸಂಜಯ್ ರಹೇಜ, ಸೂರಜ್ ರಹೇಜ ಹಾಗೂ ಸುರೇಶ್ ರಹೇಜ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದ ಮೂಲಕ ಹೆತ್ತವರಿಗೆ ಕೂಡ ಸಂದೇಶವನ್ನು ನೀಡುವ ಯತ್ನವನ್ನು ಮಾಡಲಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಎಲ್ಲಾ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಲಿಸಬೇಕು ಎನ್ನುವ ಕಳಕಳಿ ಚಿತ್ರ ತಂಡದಾಗಿದೆ.
ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶ ನೀಡುವ ಅಪ್ಪು ಚಿತ್ರ ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 19ರಂದು ತೆರೆಗೆ ಬರಲಿದೆ.
____

Be the first to comment