ಧರ್ಮ ಕೀರ್ತಿರಾಜ್ ಮತ್ತು ನಿಖಿತಾ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ “ಟಕಿಲಾ” ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿದೆ.
“ಟಕಿಲಾ” ಚಿತ್ರದ ಕಥೆ ಮಾದಕ ವ್ಯಸನದ ಬಲೆಗೆ ಬೀಳುವ ಯುವಜನರ ಕಥೆಯನ್ನು ಆಧರಿಸಿದೆ. ವಿಭಿನ್ನ ಕಥಾಹಂದರ, ಉತ್ತಮ ನಿರೂಪಣೆ ಮತ್ತು ಪ್ರಭಾವ ಬೀರುವ ಸಂದೇಶದಿಂದ ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ.
ಮನುಷ್ಯನೊಬ್ಬನು ಚಟಕ್ಕೆ ಅತಿಯಾಗಿ ಅಂಟಿಕೊಂಡಾಗ ಅದರಿಂದ ಜೀವನದಲ್ಲಿ ಆಗುವ ನಷ್ಟ ಮತ್ತು ಸಂಕಷ್ಟಗಳೇ ಈ ಚಿತ್ರದ ಕೇಂದ್ರಬಿಂದು. ಯುವಕರಿಗೆ ಎಚ್ಚರಿಕೆಯ ಗಂಟೆಯಂತೆ ಚಿತ್ರದ ಕಥೆಯನ್ನು ಕಟ್ಟಿಕೊಡಲಾಗಿದೆ. ಈ ಚಿತ್ರವು ಆ್ಯಕ್ಷನ್, ಮರ್ಡರ್ ಮಿಸ್ಟರಿ ಶೈಲಿಯಲ್ಲಿದೆ.
ಧರ್ಮ ಕೀರ್ತಿರಾಜ್ ಅವರ ನಟನೆ ಭಿನ್ನವಾಗಿದೆ. ಅವರು ತಮ್ಮ ಪಾತ್ರದಲ್ಲಿ ತೀವ್ರತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಿಖಿತಾ ಸ್ವಾಮಿ ಅವರ ಭಾವಪೂರ್ಣ ಅಭಿನಯ ಚಿತ್ರಕ್ಕೆ ಜೀವಂತಿಕೆಯನ್ನು ತಂದಿದೆ.
ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ಮಾಪಕ ಮರಡಿಹಳ್ಳಿ ನಾಗಚಂದ್ರ ಈ ಚಿತ್ರವನ್ನು ನಿರ್ಮಿಸಿದ್ದಾರೆ.ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಪ್ರವೀಣ್ ನಾಯಕ್ ಹೊತ್ತಿದ್ದಾರೆ. ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಕ್ಯಾಮರಾ ಕೆಲಸ ಅತ್ಯುತ್ತಮವಾಗಿದೆ. ಸಂಗೀತ ನಿರ್ದೇಶಕ ರೇಣು ಚಿತ್ರಕ್ಕೆ ಭಾವುಕತೆ ಮತ್ತು ತೀವ್ರತೆಯನ್ನು ತುಂಬಿದ್ದಾರೆ.
—–

Be the first to comment