17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29 ರಿಂದ ಫೆಬ್ರವರಿ 6, 2026 ವರೆಗೆ ನಡೆಯಲಿದೆ.
ಒಟ್ಟು 9 ದಿನಗಳ ಕಾಲ ಚಲನಚಿತ್ರೋತ್ಸವವು ನಡೆಯಲಿದೆ. ಚಲನಚಿತ್ರೋತ್ಸವದಲ್ಲಿ 2025ರ ಜನವರಿ 1ರಿಂದ 2025ರ ಡಿಸೆಂಬರ್ 31ರ ಒಳಗೆ ತಯಾರಾಗಿರುವ ಚಲನಚಿತ್ರಗಳನ್ನು ಸ್ಪರ್ಧೆಗೆ ಸಲ್ಲಿಸಬಹುದಾಗಿದೆ.
ಈ ಬಾರಿಯೂ “ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಭಾರತೀಯ ಚಲನಚಿತ್ರಗಳನ್ನು ಪ್ರತಿನಿಧಿಸುವ “ಚಿತ್ರಭಾರತಿ” ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ, “ಏಷಿಯನ್ ಸಿನಿಮಾ” ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.
ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಪ್ರಮಾಣ ಪತ್ರದಲ್ಲಿ ನಮೂದಿಸುವ ದಿನಾಂಕವನ್ನೇ ನಿರ್ಮಾಣದ ದಿನಾಂಕ ಎಂದು ಪರಿಗಣಿಸಲಾಗುತ್ತದೆ. ಡಿಸೆಂಬರ್ 6ರಿಂದ 31ರವರೆಗೆ ಅರ್ಜಿಗಳನ್ನು ಚಲನಚಿತ್ರೋತ್ಸವ ಜಾಲತಾಣ www.biffes.org ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8904645529 ಸಂಖ್ಯೆಗೆ ಕರೆ ಅಥವಾ biffesblr@gmail.comಗೆ ಇ–ಮೇಲ್ ಮಾಡಬಹುದಾಗಿದೆ.
ಅರ್ಜಿಯೊಂದಿಗೆ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ನೀಡಬೇಕು. “ಕನ್ನಡ ಸಿನಿಮಾ”, “ಚಿತ್ರಭಾರತಿ – ಭಾರತೀಯ ಸಿನಿಮಾ’ ಹಾಗೂ ‘ಏಷಿಯನ್ ಸಿನಿಮಾ’ ಸ್ಪರ್ಧಾ ವಿಭಾಗಕ್ಕೆ ಪ್ರತಿ ಅರ್ಜಿಗೂ ರೂ.3,000 ಪ್ರವೇಶ ಶುಲ್ಕವಿರುತ್ತದೆ. ಸ್ಪರ್ಧೆಗೆ ಸಲ್ಲಿಸುವ ಚಲನಚಿತ್ರಗಳು ಇಂಗ್ಲಿಷ್ ಉಪಶೀರ್ಷಿಕೆ ಒಳಗೊಂಡಿರಬೇಕು ಎಂದು ಪ್ರಕಟಣೆ ತಿಳಿಸಿದೆ.
—–





Be the first to comment