ಬಾಲಿವುಡ್ ಚಿತ್ರ ‘ಆದಿಪುರುಷ್’ ನಿಷೇಧಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿದಾರ ಕುಲದೀಪ್ ತಿವಾರಿ ಅವರ ಪರವಾಗಿ ಹಾಜರಾದ ವಕೀಲೆ ರಂಜನಾ ಅಗ್ನಿಹೋತ್ರಿ ಅವರು ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ರೇಣು ಅಗರ್ವಾಲ್ ಅವರ ವಿಭಾಗೀಯ ಪೀಠದ ಮುಂದೆ ಚಿತ್ರದ ಆಕ್ಷೇಪಾರ್ಹ ವಿಷಯಗಳನ್ನು ಪಟ್ಟಿ ಮಾಡಿ ಚಿತ್ರ ನಿಷೇಧಿಸುವಂತೆ ಕೋರಿದರು.
ಚಿತ್ರದ ಟೀಸರ್ ನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಉಲ್ಲೇಖಿಸಿದ ಅಗ್ನಿಹೋತ್ರಿ, ಮುಂದಿನ ವರ್ಷ ಜನವರಿ 12 ರಂದು ಬಿಡುಗಡೆಯಾಗಲಿರುವ ಚಿತ್ರವನ್ನು ನಿಷೇಧಿಸುವಂತೆ ಕೋರಿದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲ ಅಶ್ವನಿ ಸಿಂಗ್, ಅರ್ಜಿದಾರರು ಕೇಂದ್ರ, ರಾಜ್ಯ, ಸೆನ್ಸಾರ್ ಮಂಡಳಿ, ಚಿತ್ರದ ನಿರ್ದೇಶಕ ಓಂ ರಾವತ್, ನಟರಾದ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಮೆನನ್ ಮತ್ತು ಇತರರನ್ನು ಪ್ರಕರಣದಲ್ಲಿ ದೋಷಾರೋಪಣೆ ಮಾಡಿದ್ದಾರೆ ಎಂದು ಹೇಳಿದರು.
ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
___

Be the first to comment