ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ದೈವಕ್ಕೆ ಅವಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಟ ರಣವೀರ್ ಸಿಂಗ್ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಸಿನಿಮೋತ್ಸವದಲ್ಲಿ ರಣವೀರ್ ಮತ್ತು ರಿಷಬ್ ಭಾಗಿಯಾಗಿದ್ದು, ಮಾತನಾಡುವ ವೇಳೆ ರಣವೀರ್ ಅವರು ರಿಷಬ್ ಶೆಟ್ಟಿಯ ‘ಕಾಂತಾರ’ ಚಿತ್ರದ ಅಭಿನಯವನ್ನು ಹೊಗಳಿದರು. ಆದರೆ ರಿಷಬ್ ಅವರ ದೈವ ನೃತ್ಯವನ್ನು ಹಾಸ್ಯಾತ್ಮಕವಾಗಿ ಅನುಕರಿಸುವ ಅವರ ಪ್ರಯತ್ನ ವಿರೋಧಕ್ಕೆ ಕಾರಣವಾಯಿತು. ಕೆಲವರಿಗೆ ಅವರು ಜೋಕರ್ ತರ ಕಾಣಿಸಿದರು ಎಂಬ ಪ್ರತಿಕ್ರಿಯೆಗಳು ಬಂದವು. ಅವರು ಎಡವಟ್ಟಾಗಿ ‘ದೈವ’ ಎಂಬ ಬದಲು ‘ದೆವ್ವ’ ಎಂದು ಉಚ್ಚರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಉಂಟು ಮಾಡಿತು.
“ರಿಷಬ್ ಅವರ ಅದ್ಭುತ ಅಭಿನಯಕ್ಕೆ ಗೌರವ ಸೂಚಿಸುವುದು ನನ್ನ ಉದ್ದೇಶ. ಆ ದೃಶ್ಯ ನಿರ್ಮಾಣಕ್ಕೆ ಬೇಕಾಗುವ ಶ್ರಮ ನನಗೆ ತಿಳಿದಿದೆ. ಅವರ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ. ನಮ್ಮ ದೇಶದ ಎಲ್ಲ ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಗಳಿಗೆ ನಾನು ಅಪಾರ ಗೌರವ ಹೊಂದಿದ್ದೇನೆ. ಯಾರದ್ದಾದರೂ ಭಾವನೆಗಳಿಗೆ ನೋವುಂಟುಮಾಡಿದ್ದರೆ, ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ” ಎಂದು ರಣವೀರ್ ತಿಳಿಸಿದ್ದಾರೆ.
ರಣವೀರ್ ಸಿಂಗ್ ಬೇಷರತ್ ಕ್ಷಮೆಯೊಂದಿಗೆ ವಿವಾದಕ್ಕೆ ತೆರೆಬೀಳುವ ನಿರೀಕ್ಷೆ ಇದೆ.
—-





Be the first to comment