ಕ್ಷಮೆಯಾಚಿಸಿದ ಮಲಯಾಳಂ ಚಿತ್ರತಂಡ

ಬೆಂಗಳೂರು ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ  ‘ಲೋಕಃ ಚಾಪ್ಟರ್ 1 ಚಂದ್ರʼ ಮಲಯಾಳಂ ಚಿತ್ರತಂಡ  ಕ್ಷಮೆಯಾಚಿಸಿದೆ.

ಬೆಂಗಳೂರಿನ ಹುಡುಗಿಯರನ್ನು ಮದುವೆ ಆಗಲ್ಲ. ಅವರು ನಡತೆಗೆಟ್ಟವರು ಎಂಬ ಡೈಲಾಗ್ ಒಂದನ್ನು ಲೋಕಃ ಸಿನಿಮಾದಲ್ಲಿರುವ ಪಾತ್ರವೊಂದು ಹೇಳಿದ್ದು, ಇದಕ್ಕೆ ಕನ್ನಡಿಗರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ‘ಬೆಂಗಳೂರಿನವರು ಡಗಾರ್‌ಗಳು’ ಎನ್ನುವ ಪದ ಬಳಕೆ ಮಾಡಲಾಗಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಚಿತ್ರದ ಶೂಟಿಂಗ್‌ ಬಹುತೇಕ ಬೆಂಗಳೂರಿನಲ್ಲೇ ನಡೆದಿದೆ. ಚಿತ್ರದ ಕಥೆಗೂ ಬೆಂಗಳೂರಿನ ನಂಟಿದ್ದು, ಈ ಚಿತ್ರದಲ್ಲಿ ಬೆಂಗಳೂರಿಗರಿಗೆ ಅವಮಾನ ಮಾಡುವ ಪದ ಬಳಕೆ ಆಗಿದೆ. ಬೆಂಗಳೂರೆಂದರೆ ಕೇವಲ ಕ್ರೈಂ, ಪಾರ್ಟಿ, ಡ್ರಗ್ಸ್‌ಗಳಿಗೆ ಸೀಮಿತ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ, ಮಾತ್ರವಲ್ಲದೇ ‘ಬೆಂಗಳೂರಿನ ಹುಡುಗಿಯರು ಡಗಾರ್‌ಗಳು ಎಂಬ ಸಂಭಾಷಣೆ ಕೂಡ ಇದೆ ಎಂದು ಹೇಳಲಾಗಿದೆ.

ದಕ್ಷಿಣ ಭಾರತದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್‌ ಅಭಿನಯದ  ಚಿತ್ರ ‘ಲೋಕಃ: ಚಾಪ್ಟರ್ 1- ಚಂದ್ರ’ ಇತ್ತೀಚೆಗೆ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ರಿಲೀಸ್‌ ಆಗಿ 5 ದಿನಗಳಲ್ಲಿ ಜಾಗತಿಕವಾಗಿ 81 ಕೋಟಿ ರೂ. ದೋಚಿಕೊಂಡಿದೆ. ಸದ್ಯದಲ್ಲೇ 100 ಕೋಟಿ ರೂ. ಕ್ಲಬ್‌ ಸೇರುವ ಸಾಧ್ಯತೆ ಇದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!