ಭಾರತದ ಕ್ಷಿಪಣಿ ತಜ್ಞ ಎಪಿಜೆ ಅಬ್ದುಲ್ ಕಲಾಂ ಅವರ ಯಶೋಗಾಥೆ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎಂಬ ಸಿನಿಮಾವಾಗುತ್ತಿದೆ.
ಎಪಿಜೆ ಅಬ್ದುಲ್ ಕಲಾಂ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಧನುಷ್ ನಾಯಕನಾಗಿ ನಟಿಸುತ್ತಿದ್ದಾರೆ. ಆದಿಪುರುಷ ಸಿನಿಮಾ ಮಾಡಿದ್ದ ಓಂ ರಾವ್ ಈ ಚಿತ್ರದ ಸೂತ್ರಧಾರ. ಕಾನ್ಸ್ ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಚಿತ್ರ ಡಾ. ಕಲಾಂ ಅವರ ಅಸಾಧಾರಣ ಯಶೋಗಾಥೆ ಹೇಳುತ್ತದೆ. ರಾಮೇಶ್ವರಂನಿಂದ ಕ್ಷಿಪಣಿ ತಜ್ಞರಾಗಿ ಅವರು ಗಳಿಸಿದ ಖ್ಯಾತಿ, ಭಾರತದ 11 ನೇ ರಾಷ್ಟ್ರಪತಿಯಾಗಿ ಅಧಿಕಾರ ನಡೆಸಿದ ಕ್ಷಣ, ವಿಜ್ಞಾನಿ, ಕವಿ, ಶಿಕ್ಷಕ ಮತ್ತು ತತ್ವಜ್ಞಾನಿಯನ್ನೂ ಅನ್ವೇಷಿಸುವ ಗುರಿಯನ್ನು ಈ ಚಿತ್ರ ಹೊಂದಿದೆ.
ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ ವಿಂಗ್ಸ್ ಆಫ್ ಫೈರ್ ನಿಂದ ಪ್ರೇರಿತವಾದ ಈ ಕಥೆಯನ್ನು ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕರಾದ ಅಭಿಷೇಕ್ ಅಗರ್ವಾಲ್ , ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದಾರೆ. ಸೈವಿನ್ ಕ್ವಾಡ್ರಾಸ್ ಸಿನಿಮಾಗೆ ಚಿತ್ರಕಥೆ ಬರೆಯುತ್ತಿದ್ದಾರೆ.
—–

Be the first to comment