‘ಲಡ್ಡು’ ಚಿತ್ರ ವಿಮರ್ಶೆ :SUGARLESS ಲಡ್ಡು!
ತಾರಾಗಣ: ಪವಿತ್ರಾ ನಾಯಕ್, ಬಿಂದುಶ್ರೀ, ಹರ್ಷಿತ್, ನವೀನ್, ಸಮೀರ್, ಮಧು, ವಿಶಾಲ…
ನಿರ್ದೇಶನ: ರಮಾನಂದ ಆರ್
ಛಾಯಾಗ್ರಹಣ: ಪುರುಷೋತ್ತಮ್
ನಿರ್ಮಾಣ: ಮೇಘನಾ ವಿ.
ಬಿಸಿನಿಮಾಸ್ ರೇಟಿಂಗ್ ……
‘ಲಡ್ಡು’ ಚಿತ್ರ ವಿಮರ್ಶೆ : 👇
ಪೈನಲೀ ನಿರ್ದೇಶಕ ರಮಾನಂದ ಪ್ರೇಕ್ಷಕರ ಬಾಯಿಗೆ ಲಡ್ಡು ತುರಿಕಿದ್ದಾರೆ. ಪ್ರೇಕ್ಷಕ ಬೇಡ ಬೇಡವೆಂದರೂ ಒತ್ತಾಯ ಮಾಡಿ ತಿನ್ನಿಸಿದ್ದರಿಂದ ನೋಡುಗ ವಾಂತಿ ಮಾಡಿಕೊಂಡಿದ್ದಾನೆ. ಹೌದು, ನಿಮ್ಮ ಗೆಸ್ ಕರೆಕ್ಟ್ ನಾನು ಹೇಳ್ತಾ ಇರೋದು ಈ ವಾರ ತೆರೆಕಂಡು ರಾಜ್ಯಾದ್ಯಾಂತ ಖಾಲಿ ಥೀಯೆಟರ್ನಲ್ಲಿ ಓಡುತ್ತಿರುವ ‘ಲಡ್ಡು’ ಚಿತ್ರದ ಬಗ್ಗೆ ಈ ಅರೆಬೆಂದ ರಮಾನಂದ್ ಅನ್ನುವ ಡೈರೆಕ್ಟರ್ ರಿಲೀಸ್ಗೂ ಮುನ್ನ ತೋರಿಸಿದ TRAILER ನೋಡಿನೇ ಪ್ರೇಕ್ಷಕರು ಸಿನಿಮಾ ನೋಡಬಾರದೆಂದು ಶಪಥ ತೊಟ್ಟಿದ್ದರು. ಯಾಕೆಂದರೆ TRAILER ಮೂಲಕವೇ ಈತ ತನ್ನ ಖಾಲಿ ತಲೆಯನ್ನು ಜಗತ್ತಿಗೆ ತೋರಿಸಿದ್ದ! TRAILERನ ಕೆಲವು ಸಂಭಾಷಣೆಗಳಂತೂ ‘ಹೊಲಸು ಮನಸ್ಸಿನ ವಿವಿಧ ಮುಖಗಳು’. ಇರ್ಲಿ, trailetನಲ್ಲಿ ಇಲ್ಲದ್ದು ಸಿನಿಮಾದಲ್ಲಿ ಇರ್ಬಹುದೆನೋ ಎಂದು ನೋಡಿದ್ರೆ, ಅಲ್ಲಿ ತೋರಿಸಿದ trailerನಲ್ಲಿರೋ ಒಂದಷ್ಟು ‘ಪರ್ವಾಗಿಲ್ಲಾ’ ಅನ್ನುವ ಶಾಟ್ಸ್ ಬಿಟ್ಟರೆ ಉಳಿದದ್ದೆಲ್ಲಾ ಲ್ಯಾಗೇಶ್ವರಾ! ಎರಡೂವರೆ ಗಂಟೆ ಈ ಸಿನಿಮಾವನ್ನು ಸಂಪೂರ್ಣವಾಗಿ ನೋಡಿದನಿಗೆ ‘ಲಡ್ಡು’ ಚಿತ್ರತಂಡದಿಂದ ಒಂದು ಬಹುಮಾನ ಘೋಷಿಸೋದು ಉತ್ತಮ.
ಆಲ್ ರೈಟ್ ಹಿಂದೊಕ್ಕೋಗೋಣ, ಚಿತ್ರದ ಕಥೆ ಬಗ್ಗೆ ಚಿತ್ರ ನೋಡಿದ ತಪ್ಪಿಗೆ ನಿಮ್ಗೂ ಹೇಳ್ತೀನಿ ಸಹಿಸ್ಕಳ್ಳಿ. ಮಲೆನಾಡಿನ ಒಂದು ಸ್ಮಾಲ್ವಿಲೇಜ್, ಅಲ್ಲಿ ಐದು ಜನ ವೇಸ್ಟ್ಬಾಡಿಗಳು..ಅಲ್ಲಿಗೆ ಒಬ್ಬಳು ಸುಂದ್ರಿಯ ಎಂಟ್ರಿ.. ಅವಳನ್ನು ಬುಟ್ಟಿಗೆ ಹಾಕಿಕೊಳ್ಳಲು ಈ ವೇಸ್ಟ್ಬಾಡಿಗಳ ನಾನ್ಸೆನ್ಸ್ ಆಟಗಳು. ಇಷ್ಟರಲ್ಲೇ ವಿರಾಮ ಬಂದು ಬಿಡುತ್ತದೆ. ಅಷ್ಟು ಹೊತ್ತು ಇದೆನ್ನೆಲ್ಲಾ ಕಷ್ಟಪಟ್ಟು ಸಹಿಸಿಕೊಂಡ ಪ್ರೇಕ್ಷಕ ಸೂಸು ಮಾಡಿ ಮನೆಗೆ ಹೋಗ್ತಾನೆ!
ಇರ್ಲಿ ಸೆಕೆಂಡ್ಹಾಫ್ನಲ್ಲಿ ಏನಾದ್ರು ದಬ್ಬಾಕಿದಾರಾ? ಅಸಲಿಗೆ ಸಿನಿಮಾ ಇರೊದೆ ಸೆಕೆಂಡ್ಹಾಫ್ನಷ್ಟೇ! ಫಸ್ಟ್ಹಾಫ್ ಒಂದು ಕಾಲು ಗಂಟೆಯ trailer. ಸೆಕೆಂಡ್ಹಾಫ್ನಲ್ಲಿ ಅಂತೂ ಇಂತು ಒಬ್ಬ ವೇಸ್ಟ್ಬಾಡಿ ಆ ಹುಗುಡಿಯನ್ನ ಪಟಾಯಿಸುವುದರಲ್ಲಿ ಯಶಸ್ವಿಯಾಗುತ್ತಾನೆ. ಆಗಲೇ, ಒಂದು ಭಯಂಕರ ಟ್ವಿಸ್ಟ್. ಏನು ಗೊತ್ತಾ? ಆ ವಿಲೇಜ್ಗೆ ಇನ್ನೊಬ್ಬಳು ಎಂಟ್ರಿ. ಆಮೇಲೆ ಇಡೀ ಸಿನ್ಮಾ ಟ್ವಿಸ್ಟ್ ಮೇಲೆ ಟ್ವಿಸ್ಟ್. ಟ್ವಿಸ್ಟ್ ಳು ಹೇಗಿವೆಯೆಂದರೆ.. ಈಗಾಗಲೇ ಈ ಎಲ್ಲಾ ಟ್ವಿಸ್ಟ್ ಳನ್ನು ಬೇರೆ ಸಿನಿಮಾದಲ್ಲಿ ನೋಡುರ್ತೀರಿ! ಇದರ ಜೊತಗೆ ಅಲ್ಲಲ್ಲಿ ಟಾರ್ಚರ್ ಕೊಡೊ ಕಾಮಿಡಿ, ಡಬಲ್ ಮೀನಿಂಗ್ ಡೈಲಾಗ್.. ಕ್ಯೂರಿಯಾಸಿಟೀ ಹುಟ್ಟಿಸದ ಸಸ್ಪೆನ್ಸ್ ..ಹೀಗೆ ಎಲ್ಲಾ ಇದೆ.
ಇನ್ನು ಪರ್ಫಾಮೆಸ್ಸ್ ವಿಷಯಕ್ಕೆ ಬರೋದಾದ್ರೆ, ಇದ್ದದ್ರಲ್ಲಿ ಬೆಸ್ಟ್ ಬಿಂದುಶ್ರೀ ಮತ್ತು ಪವಿತ್ರ ನಾಯಕ್. ಬಹುಶಃ ಇವರಿಬ್ಬರೂ ಡೈರೆಕ್ಟರ್ ಮಾತು ಕೇಳದೇ ಇರೋದಕ್ಕೆ ಏನೋ.. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಅಷ್ಟೂ ವೇಸ್ಟ್ಮಾಡಿಗಳು ತಮ್ಮ ತಮ್ಮ ಪಾತ್ರಕ್ಕೆ ಅನ್ಯಾಯ ಒದಗಿಸಿದ್ದಾರೆ! ಸಿನ್ಮಾದ ಫಸ್ಟ್ ಹಾಫ್ ನಲ್ಲಿ ಆಕ್ಟಿಂಗ್ training ತಗೊಂಡಿರೋ ಇವರು ಚಿತ್ರದ ಕೈಮಾಕ್ಸ್ಗೆ ಬರೊವಾಗ.. ‘ಸಹಿಸೆಬಲ್ actors ಆಗಿದ್ದಾರೆ. ಚಿತ್ರದ ಹಾಡು ಮತ್ತು ಶೂಟ್ ಮಾಡಿರೋ ಲೋಕೆಶನನ್ ಸೂಪರ್. ನಿರ್ದೇಶಕ ರಮಾನಂದ ಅವರು ಎಡಿಟರ್ಗೆ ಕೆಲಸ ಕೊಡದೆ, ನಿರ್ಮಾಪಕಿ ಮೇಘನಾ ಅವರ ಮರ್ಜಿಗೆ ಬಿದ್ದು ಶೂಟ್ ಮಾಡಿದ್ರಲ್ಲಿ ಬಹುತೇಕ ಲಡ್ಡುಗೆ ಮತ್ತಿದ್ದಾರೆ. ಒಟ್ಟಿನಲ್ಲಿ, ಇಡೀ ಚಿತ್ರತಂಡ ಸಿಹಿ ಲಡ್ಡು ತಿನ್ನಲ್ಲು ಥೀಯೆಟರ್ಗೆ ಹೋದ ಪ್ರೇಕ್ಷಕನಿಗೆ ಸಪ್ಪೆ ಬೂಂದಿಕೊಟ್ಟು ಕಳಿಸಿದ್ದಾರೆ!
ಕೊನೆಗೆ, ನಿರ್ದೇಶಕ ಎ.ಪಿ.ಅರ್ಜುನ್ಗೆ ಒಂದು ಪ್ರಶ್ನೆ.. ನೀವು ಕೆಟ್ಟ ವಿಮರ್ಶೆ ಮಾಡಿದವರಿಗೆ ತದಿಕಿ ಅಂತಿರಲ್ಲಾ? ಈ ಥರ ಚಿತ್ರ ಮಾಡೋವರನ್ನು ಏನು ಮಾಡಬೇಕು? ಇಂತಹ ಚಿತ್ರದ ಬಗ್ಗೆಯೂ ಕಮೆಂಟ್ಸ್ ಮಾಡಬಾರದಾ?
@ಬಿಸಿನಿಮಾಸ್ ವಿಮರ್ಶೆ
Be the first to comment