ಅನುಶ್ರೀ

ಆಗಸ್ಟ್ ನಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಮದುವೆ!

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಈ ವರ್ಷದ ಆಗಸ್ಟ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ಆಗಸ್ಟ್ 28ರಂದು ಅನುಶ್ರೀ ಅವರ ಮದುವೆ ನಡೆಯಲಿದೆ. ಕೊಡಗು ಮೂಲದ ಉದ್ಯಮಿ ರೋಷನ್ ಅವರನ್ನು ಅನುಶ್ರೀ ಅವರು ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಅನುಶ್ರೀ ಅವರು ಕುಟುಂಬಸ್ಥರು ನೋಡಿದ ಹುಡುಗನನ್ನು ಮದುವೆಯಾಗುತ್ತಿದ್ದಾರೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ಹೇಳಲಾಗಿದೆ. ಮದುವೆಗಾಗಿ ಅನುಶ್ರೀ ಹಾಗೂ ರೋಷನ್ ಕುಟುಂಬಸ್ಥರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಡ್ಯಾನ್ಸರ್ ಆಗಿದ್ದ ಅನುಶ್ರೀ ಅವರು ನಟಿಯಾಗಿ ಕೆಲಸ ಮಾಡಿದ್ದಾರೆ. ಆದರೆ ನಿರೂಪಣೆ ಅವರಿಗೆ ಹೆಚ್ಚಿನ ಹೆಸರನ್ನು ತಂದುಕೊಟ್ಟಿದೆ. ನಿರೂಪಣೆ ಮೂಲಕ ಅನುಶ್ರೀ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ತಮ್ಮ ಮದುವೆಯ ಬಗ್ಗೆ ಅನುಶ್ರೀ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!