ಆ್ಯಂಕರ್ ಅನುಶ್ರೀ ಹಾಗೂ ರೋಷನ್ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ಅದ್ದೂರಿಯಾಗಿ ನೆರವೇರಿದೆ.
ಅನುಶ್ರೀ ಅವರು ಮದುವೆ ಆಗುವ ಸಂದರ್ಭದಲ್ಲಿ ಭಾವುಕರಾಗಿದ್ದರು. ಮತ್ತೊಂದು ಕಡೆ ತಾವು ಮದುವೆ ಆಗುತ್ತಿರುವ ಖುಷಿ ಕೂಡ ಮೊಗದಲ್ಲಿ ಎದ್ದು ಕಾಣಿಸುತ್ತಿತ್ತು. ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು. ಶಿವರಾಜ್ಕುಮಾರ್, ‘ಸು ಫ್ರಮ್ ಸೋ’ ನಟ, ನಿರ್ಮಾಪಕ ರಾಜ್ ಬಿ. ಶೆಟ್ಟಿ ಸೇರಿದಂತೆ ಅನೇಕರು ನವ ದಂಪತಿಗೆ ಶುಭ ಹಾರೈಸಿದರು.
ಅನುಶ್ರೀ ಅವರು ಯಾವ ರೀತಿಯಲ್ಲಿ ಮದುವೆ ಆಗಬೇಕು ಎಂದು ಕನಸು ಕಂಡಿದ್ದರೋ ಅದೇ ರೀತಿಯಲ್ಲಿ ಮದುವೆ ಆಗಿದ್ದಾರೆ. ಅನುಶ್ರೀ ಮದುವೆಗೆ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ. ಹೀಗಾಗಿ ಅಭಿಮಾನಿಗಳನ್ನು ಒಳಗೆ ಬಿಟ್ಟಿಲ್ಲ. ಕೇವಲ ಆಪ್ತರಿಗೆ, ಕುಟುಂಬದವರಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.
ವಿವಾಹಕ್ಕೆ ಆಮಂತ್ರಣ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಅಭಿಮಾನಿಗಳನ್ನು ಆರಂಭದಲ್ಲೇ ತಡೆದು ಕಳುಹಿಸಲಾಗುತ್ತಿದೆ. ಇದರಿಂದ ಫ್ಯಾನ್ಸ್ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅಭಿಮಾನಿಗಳನ್ನು ಒಳಗೆ ಬಿಟ್ಟರೆ ನೂಕು ನುಗ್ಗಲು ಆಗಿವ ಸಾಧ್ಯತೆ ಇರುತ್ತದೆ. ಹೀಗಾಗಿ ಅನುಶ್ರೀ ಆಮಂತ್ರಣ ಇರುವವರಿಗೆ ಮಾತ್ರ ಒಳಗೆ ಬಿಡಲು ಸೂಚನೆ ನೀಡಿದ್ದಾರೆ.

—-





Be the first to comment