ಅನುಶ್ರೀ ಹಳದಿ ಶಾಸ್ತ್ರ ಫೋಟೋ ವೈರಲ್

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಹಳದಿ ಶಾಸ್ತ್ರ  ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಅನುಶ್ರೀ ಅವರು ರೋಷನ್ ಎಂಬುವವರ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಈ ಇಬ್ಬರ ಮದುವೆ ಬೆಂಗಳೂರಿನ ಹೊರವಲಯದ ಕಗ್ಗಲಿಪುರದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿಯಲ್ಲಿ ನಡೆಯಲಿದೆ.

ನಿನ್ನೆ ಗಣೇಶ ಚತುರ್ಥಿ ದಿನ ಮದುವೆ ಮುಂಚಿನ ಹಳದಿಶಾಸ್ತ್ರ ಕಾರ್ಯಗಳು ನೆರವೇರಿದ್ದವು. ಮದುವೆಗೆ ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರಿಗೆ ಅನುಶ್ರಿ ಆಹ್ವಾನ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ.

ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಲಿದ್ದಾರೆ.  ಇದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು ಕುಟುಂಬದವರು ನೋಡಿರುವ ಹುಡುಗನನ್ನು ಅನುಶ್ರೀ ವರಿಸುತ್ತಿದ್ದಾರೆ. ರೋಷನ್ ಅನುಶ್ರೀ ಕುಟುಂಬದ ಫ್ಯಾಮಿಲಿ ಫ್ರೆಂಡ್. ಸರಳವಾಗಿರುವ ಅವರ ವಿವಾಹ ಆಮಂತ್ರಣ ಪತ್ರಿಕೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!