ನಟಿ ಅನುಶ್ರೀ ಮದುವೆ ಆಗೋ ಹುಡುಗನ ಫೋಟೋ ವೈರಲ್ ಆಗಿದೆ!
ಅನುಶ್ರೀ ಅವರ ವಿವಾಹ ರೋಷನ್ ಎಂಬ ಕೊಡಗು ಮೂಲದ ವ್ಯಕ್ತಿ ಜೊತೆ ನಡೆಯಲಿದೆ ಎಂಬ ಸುದ್ದಿ ವೈರಲ್ ಆಗಿತ್ತು. ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅನುಶ್ರೀ ಅವರು ಇನ್ಸ್ಟಾಗ್ರಾಮ್ನಲ್ಲಿ ರೋಷನ್ನ ಫಾಲೋ ಕೂಡ ಮಾಡುತ್ತಿದ್ದಾರೆ.
ರೋಷನ್ ಅವರು ಡಿಪಿಗೆ ತಮ್ಮ ಫೋಟೋ ಹಾಕಿಲ್ಲ. ಒಂದು ನಾಯಿ ಮರಿ ಫೋಟೋ ಡಿಸ್ಪ್ಲೇನಲ್ಲಿ ಇದೆ. ಹೀಗಾಗಿ ಅವರ ಗುರುತು ಯಾರಿಗೂ ಸಿಕ್ಕಿರಲಿಲ್ಲ. ಈಗ ರೋಷನ್ ಜೊತೆ ಅನುಶ್ರೀ ಇರೋ ಫೋಟೋ ವೈರಲ್ ಆಗಿದೆ.
ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಕಾಣಿಸಿಕೊಂಡಿದ್ದಾರೆ. ಪೂಜೆ ಮಾಡಿಸುವಾಗ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಇದು ವೈರಲ್ ಆಗಿದೆ. ಈ ಫೋಟೋ ಫ್ಯಾನ್ ಪೇಜ್ಗಳಲ್ಲಿ ಹರಿದಾಡುತ್ತಿದೆ.
ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಷನ್ ವಿವಾಹ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಮದುವೆ ವಿಚಾರವನ್ನು ಅನುಶ್ರೀ ಅವರು ಅಧಿಕೃತ ಮಾಡಿಲ್ಲ. ಶೀಘ್ರವೇ ಈ ಬಗ್ಗೆ ಅವರು ಮಾಹಿತಿ ನೀಡುವ ಸಾಧ್ಯತೆ ಇದೆ.





Be the first to comment