ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಮತ್ತೆ ಡ್ರಗ್ ಸಂಕಷ್ಟ ಎದುರಾಗಿದ್ದು ಪೊಲೀಸರು ಅವರ ಹೆಸರನ್ನು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಡ್ರಗ್ಸ್ ಪ್ರಕರಣದ ಎ2 ಆರೋಪಿಯಾಗಿರುವ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
“ಅನುಶ್ರೀ ಡ್ರಗ್ ಸೇವಿಸಿರೋದು ನಿಜ. ಡ್ರಗ್ ಸೇವನೆ ಮಾತ್ರವಲ್ಲದೇ ಅನುಶ್ರೀ ಡ್ರಗ್ ಸಾಗಾಟ ಕೂಡಾ ಮಾಡುತ್ತಿದ್ದರು. ನಮ್ಮ ರೂಂಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು” ಎಂದು ಕಿಶೋರ್ ಶೆಟ್ಟಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
“ಅನುಶ್ರೀ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಡ್ಯಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಕೆಲ ದಿನಗಳ ಕಾಲ ನಾನು ಅವರ ಜೊತೆ ಹೋಗಿದ್ದೆ. ಮೂರು ಜನ ಅಡುಗೆ ಮಾಡಿ ಊಟ ಮಾಡುವ ಸಮಯದಲ್ಲಿ Ecstasy ಪಿಲ್ಸ್ ಸೇವನೆ ಮಾಡುತ್ತಿದ್ದೆವು. ನಾವು ಮೂವರು ಬೆಂಗಳೂರಿನಲ್ಲಿ ಮಾದಕ ವಸ್ತು ಸೇವಿಸಿ ಡ್ರಿಂಕ್ಸ್ ಪಾರ್ಟಿ ಮಾಡಿದ್ದೆವು”ಎಂದು ಆರೋಪಿ ಕಿಶೋರ್ ಪೊಲೀಸರ ಮುಂದೆ ಹೇಳಿದ್ದಾನೆ.
“ಡ್ರಗ್ಸ್ ಸೇವನೆಯಿಂದ ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ. ಪ್ರಾಕ್ಟೀಸ್ ಮಾಡಲು ಸುಲಭವಾಗುತ್ತದೆ ಎಂದು ನಾವೆಲ್ಲರೂ ಮಾತನಾಡಿಕೊಳ್ಳುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್ ಗಳ ಪರಿಚಯ ಇದ್ದು ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಆದರೆ ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ” ಎಂದು ಆರೋಪಿ ಕಿಶೋರ್ ಹೇಳಿಕೆ ನೀಡಿರುವುದನ್ನು ಚಾರ್ಜ್ ಶೀಟ್ ನಲ್ಲಿ ನಮೂದಿಸಲಾಗಿದೆ.
ಅನುಶ್ರೀ ಅವರು ಕಿಶೋರ್, ತರುಣ್ ಜೊತೆ ಹಲವು ಬಾರಿ ಮಾದಕ ವಸ್ತು ಸೇವಿಸಿರುವ ವಿಚಾರ ಮಂಗಳೂರು ಸಿಸಿಬಿ ಪೊಲೀಸರಿಗೆ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ಇನ್ನಷ್ಟೇ ಸಲ್ಲಿಸಬೇಕಿದೆ.
Be the first to comment