Anushka Shetty: ಅನುಷ್ಕಾ ಶೆಟ್ಟಿ ‘ಪೊನ್ನಿಯನ್ ಸೆಲ್ವನ್’ ಕೈ ಬಿಡಲು ಕಾರಣ?!

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮೀ ಟೂ ಕಿರುಕುಳ ಕಾರಣದಿಂದ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ಟರೇ ಎನ್ನುವ ಅನುಮಾನ ಹರಿದಾಡಿದೆ.

‘ಪೊನ್ನಿಯನ್ ಸೆಲ್ವನ್’ ಸಿನಿಮಾ ನಿರ್ದೇಶಕ ಮಣಿರತ್ನಂ ಅವರು ಅನುಷ್ಕಾಗೆ ಕರೆ ಮಾಡಿ ಸಿನಿಮಾದಲ್ಲಿ ಒಳ್ಳೆಯ ಪಾತ್ರವಿದೆ ಎಂದು ಆಫರ್‌ ಮಾಡಿದ್ದರು. ಆದರೆ ಅನುಷ್ಕಾ ಶೆಟ್ಟಿ ನಿರ್ದೇಶಕರ ಅವಕಾಶವನ್ನು ತಿರಸ್ಕಾರ ಮಾಡಿದ್ದರು. ಮಣಿರತ್ನಂ ಕೊಟ್ಟ ಆಫರ್ ನ್ನು ಅನುಷ್ಕಾ ತಿರಸ್ಕಾರ ಮಾಡಲು ಮೀ ಟೂ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.

ಅನುಷ್ಕಾ ಶೆಟ್ಟಿ ಐಶ್ವರ್ಯಾ ರೈ ಮಾಡಿರುವ ಪಾತ್ರ ನಿರ್ವಹಿಸಬೇಕಿತ್ತು. ಮೀ ಟೂ ಆರೋಪಿತ ವ್ಯಕ್ತಿಯೊಬ್ಬರು ಆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಜೊತೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅನುಷ್ಕಾ ಸಿನಿಮಾ ತಿರಸ್ಕರಿಸಿದರು ಎನ್ನಲಾಗಿದೆ.

ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಗೀತರಚನೆಕಾರ ವೈರಮುತ್ತು ಕೆಲಸ ಮಾಡಿದ್ದಾರೆ. ಇವರ ಮೇಲೆ ಅನೇಕರು ಮೀ ಟೂ ಆರೋಪವನ್ನು ಮಾಡಿದ್ದಾರೆ. ನಾನು ಈ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಅನುಷ್ಕಾ ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಅನುಷ್ಕಾ ಅಥವಾ ಚಿತ್ರತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ವಿಶ್ವದಾದ್ಯಂತ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೊನ್ನಿಯನ್ ಸೆಲ್ವನ್ 2 ಸಿನಿಮಾದಲ್ಲಿ ತ್ರಿಷಾ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!