ಟಾಲಿವುಡ್ ನಟಿ ಅನುಪಮಾ ಪರಮೇಶ್ವರನ್, ಟಾಲಿವುಡ್ ಸ್ಟಾರ್ ರಾಮ್ ಪೋತಿನೇನಿ ಅವರೊಂದಿಗೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಅನುಪಮಾ ಪರಮೇಶ್ವರನ್ ಅವರ ಕುರಿತಾದ ವೈಯಕ್ತಿಯ ವಿಚಾರವೊಂದು ಲೀಕ್ ಆಗಿದೆ. ಅನುಪಮಾ ಪರಮೇಶ್ವರನ್ ರಾಮ್ ಪೋತಿನೇನಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಕರ್ಲಿ ಹೇರ್ ಬ್ಯೂಟಿ ಅನುಪಮಾ ಪರಮೇಶ್ವರನ್ ಯುವ ನಟ ರಾಮ್ ಪೋತಿನೇನಿ ಹೃದಯ ಕದ್ದಿದ್ದಾರೆ. ಅವರೊಂದಿಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಇದಕ್ಕೆ ನಟಿ ಅನುಪಮಾ ತಾಯಿ ರೆಸ್ಪಾನ್ಸ್ ಮಾಡಿದ್ದಾರೆ.
ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಮಿಂಚಿದ ಈ ಜೋಡಿ ಬಗ್ಗೆ ಹರಡಿರುವ ವದಂತಿ ಬಗ್ಗೆ ಅನುಪಮಾ ಪರಮೇಶ್ವರನ್ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಇದೆಲ್ಲ ಬರೀ ಊಹಾಪೋಹ. ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಪ್ರೇಮಂ ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ಅನುಪಮಾ ಪರಮೇಶ್ವರನ್ ಅವರು ಸತತ ಹಿಟ್ ಸಿನಿಮಾಗಳ ಮೂಲಕ ಸದ್ಯ ಟಾಪ್ ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು. ಅನುಪಮಾ ಪರಮೇಶ್ವರನ್ ಪ್ರೇಮಂ ಸಿನಿಮಾ ಮೂಲಕ ತೆಲುಗಿನಲ್ಲಿ ಸ್ಟಾರ್ ಹಿರೋಯಿನ್ ಪಟ್ಟ ಪಡೆದರು.
ಅನುಪಮಾ ಪರಮೇಶ್ವರನ್ ಅವರ ಕುರಿತಾದ ವೈಯಕ್ತಿಯ ವಿಚಾರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
Be the first to comment