ಪುರಾತನ ಫಿಲಂಸ್ ಮತ್ತೊಂದು ಚಿತ್ರ

ಪ್ರಣಮ್ ಜತೆಗೆ ಪುರಾತನ ಫಿಲಂಸ್ ಮತ್ತೊಂದು ಚಿತ್ರ

ಇತ್ತೀಚೆಗಷ್ಟೇ ಪ್ರಣಮ್ ದೇವರಾಜ್ ನಟನೆಯ ‘S/O ಮುತ್ತಣ್ಣ’ ಎಂಬ ಚಿತ್ರವನ್ನು ನಿರ್ಮಿಸಿದ್ದ ಪುರಾತನ ಫಿಲಂಸ್ ಇದೀಗ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ. ಕನ್ನಡ ಚಿತ್ರೋದ್ಯಮದಲ್ಲಿ ಉತ್ತಮ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಆಶಯ ಇಟ್ಟುಕೊಂಡು ಬಂದಿರುವ ಪುರಾತನ ಫಿಲಂಸ್ “ಪ್ರೊಡಕ್ಷನ್ ನಂ.2” ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ. ಈ ಚಿತ್ರದಲ್ಲೂ ಸಹ ಪ್ರಣಮ್ ದೇವರಾಜ್ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ತಮ್ಮ ಬ್ಯಾನರ್ ನ ಎರಡೂ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಯುವನಟ ಪ್ರಣಮ್ ದೇವರಾಜ್ ಅವರಿಗೆ ಈ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ಬು ತಿಳಿಸಿದೆ. ಈ ಚಿತ್ರಕ್ಕೂ ಸಹ ಶ್ರೀಕಾಂತ್ ಹುಣಸೂರು ಅವರೇ‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಮೊದಲ ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯದ ಕಥೆ ಹೇಳಿದ್ದ ನಿರ್ದೇಶಕ ಶ್ರೀಕಾಂತ್ ಹುಣಸೂರು, ಈ ಚಿತ್ರದ ಮೂಲಕ ಆಕ್ಷನ್ ಹಿನ್ನೆಲೆಯಲ್ಲಿ ನಡೆಯೋ ಪ್ರೇಮ ಕಥೆಯೊಂದನ್ನು ಹೇಳಹೊರಟಿದ್ದಾರೆ.

ನಾಯಕ ಪ್ರಣಮ್ ದೇವರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಪ್ರಣಮ್ – ಶ್ರೀಕಾಂತ್ ಕಾಂಬಿನೇಶನ್ ನ ಹೊಸ ಚಿತ್ರ ಘೋಷಿಸಿದ್ದು, ಇದೇ ಮಾರ್ಚ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ. ಸದ್ಯದಲ್ಲೇ ಈ ನೂತನ ಚಿತ್ರ ಸೆಟೇರಲಿದ್ದು ಮುಂದಿನ ದಿನಗಳಲ್ಲಿ ಉಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ವಿವರಗಳನ್ನು ಪ್ರಕಟಿಸಲಾಗುವುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!