ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅನಿತಾ ಭಟ್ ಧಾರಾವಾಹಿ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.
ಕನ್ಯಾದಾನ ಧಾರವಾಹಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅತಿಥಿ ಪಾತ್ರದಲ್ಲಿ ಅನಿತಾ ಭಟ್ ಕಾಣಿಸಿಕೊಳ್ಳಬೇಕಾಗಿತ್ತು. ಆಕ್ಷನ್ ಸನ್ನಿವೇಶದ ಚಿತ್ರೀಕರಣದ ಮೇಲೆ ಅನಿತಾ ಭಟ್ ಜಾರಿ ಬಿದ್ದಿತ್ತು ಬಲಗಾಲಿನ ಮಂಡಿ ಊದಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳಲ್ಲಿ ಅವರು ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಅನಿತಾ ಭಟ್ ತಿಳಿಸಿದ್ದಾರೆ.
ಅನಿತಾ ಭಟ್ ಸದ್ಯ 4 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡೆವಿಲ್ ಬ್ರದರ್ಸ್, ಮನ್ ರೇ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಜನವರಿ 25 ರಿಂದ ಮತ್ತೊಂದು ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಫೆಬ್ರವರಿ ತಿಂಗಳಿನಲ್ಲಿ ಮತ್ತೊಂದು ಚಿತ್ರ ಸೆಟ್ಟೇರಲಿದೆ. ಈ ನಡುವೆ ಅನಿತಾ ಭಟ್ ಮಂಡಿಗೆ ಗಾಯ ಮಾಡಿಕೊಂಡಿದ್ದಾರೆ.
ಅನಿತಾ ಭಟ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಅನಿತಾ ಭಟ್ ಸಿನಿಮಾ ನಿರ್ಮಾಣಕ್ಕೆ ತಯಾರಿ ನಡೆಸಿದ್ದಾರೆ. ಮಾರ್ಚ್ ನಲ್ಲಿ ಶೂಟಿಂಗ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಿಪ್ರೊಡಕ್ಷನ್ ಕೆಲಸಗಳು ಈಗಾಗಲೇ ನಡೆಯುತ್ತಿವೆ.
ಮಹಾರಾಷ್ಟ್ರದ ಕೈವಲ್ಯ ಧಾಮಕ್ಕೆ ಯೋಗ ತರಬೇತಿಗೆ ತೆರಳಲು ಅನಿತಾ ಭಟ್ ನಿರ್ಧರಿಸಿದ್ದರು. ಆದರೆ ಗಾಯ ಹೊಂದಿರುವ ಕಾರಣ ನೋಂದಣಿ ಹಾಗೂ ಫ್ಲೈಟ್ ಬುಕ್ ಕ್ಯಾನ್ಸಲ್ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅನಿತಾ ಭಟ್ ಹೇಳಿದ್ದಾರೆ.
___





Be the first to comment