ಅನೀಶ್ ನಿರ್ದೇಶಕನ ಕ್ಯಾಪ್ ತೊಡಲು ತಯಾರಿ

‘ಆರಾಮ್ ಅರವಿಂದ ಸ್ವಾಮಿ’  ಯಶಸ್ಸಿನ ನಂತರ ನಟ ಅನೀಶ್  ಕಮರ್ಷಿಯಲ್ ಅಂಶಗಳನ್ನು ಒಳಗೊಂಡ  ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ.

ಭಾವಪ್ರೀತ್ ಪ್ರೊಡಕ್ಷನ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಈ ಚಿತ್ರಕ್ಕೆ ವಿಜಯ್ ಎಂ ರೆಡ್ಡಿ ಅವರ ಬೆಂಬಲವಿದೆ. ಈ ಚಿತ್ರದ ಮೂಲಕ ವಿಜಯ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ರೋಚಕ ಸುದ್ದಿಯನ್ನು ಅನೀಶ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಮುಂದಿನ ಯೋಜನೆಯನ್ನು ಘೋಷಿಸಲು ಥ್ರಿಲ್ ಆಗಿದ್ದೇನೆ. ರಾಮಾರ್ಜುನ ಚಿತ್ರದ ನಂತರ  ನಾನು ಮತ್ತೊಮ್ಮೆ ನಿರ್ದೇಶಕನ ಕುರ್ಚಿಗೆ ಮರಳುತ್ತಿದ್ದೇನೆ ಮತ್ತು ಈ ಬಾರಿ ಅದು ದೊಡ್ಡದಾಗಿರಲಿದೆ ಮತ್ತು ಉತ್ತಮವಾಗಿರಲಿದೆ!.  ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಮ್ಮ ತಂಡವು ಶ್ರಮಿಸುತ್ತಿದೆ. ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ನಾನು ನಂಬುತ್ತೇನೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಲು, ನಾವು ಕನ್ನಡ ಮತ್ತು ತೆಲುಗು ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದಿದ್ದಾರೆ ಅನೀಶ್.

ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಶೀಘ್ರದಲ್ಲೇ ಶೀರ್ಷಿಕೆ, ತಾರಾಗಣ ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಲಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!