ಸ್ಯಾಂಡಲ್‍ವುಡ್‍ನಲ್ಲಿ ಅತ್ಯಂತ ಯಶಸ್ವಿಯಾಗಿ ಸ್ಟಾಂಡ್ ಹಾಕಿ ನಿರಂತರ ಸೈಕಲ್ ತುಳಿಯತ್ತಿರುವ ನಟ ಯಾರು?.. ಈ ಪ್ರಶ್ನೆಗೆ ಸ್ಪಷ್ಟ ಉತ್ತರ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್. ಬಿಕಾಸ್, ತನ್ನ ಟ್ಯಾಂಲೆಂಟ್‍ಗೆ ವಿರುದ್ಧವಾದ ಫೀಲ್ಡ್ ಅನ್ನು ಆಯ್ಕೆ ಮಾಡಿಕೊಂಡಿರುವ ಅನಿರುದ್ಧ್ ಚಿತ್ರಮಾಡುವುದನ್ನು ಬಿಡುವುದಿಲ್ಲ.. ಪ್ರೇಕ್ಷಕ ಅಪ್ಪಿತಪ್ಪಿಯೂ ಈತನ ಚಿತ್ರಗಳನ್ನು ನೋಡುವುದಿಲ್ಲ. ವ್ಯಯಕ್ತಿಕವಾಗಿ ತುಸು `ಅತೀ’ ಅನ್ನುವಷ್ಟು ಸಭ್ಯರಾಗಿರುವ ಇವರ ಬಗ್ಗೆ ಎಂಥವನಿಗೂ ಕನಿಕರ ಹುಟ್ಟುತ್ತದೆ. ಸಭ್ಯತೆ, ಒಳ್ಳೆತನ ಎಲ್ಲವನ್ನೂ ಪ್ರೇಕ್ಷಕ ನೋಡಲಾರ ಅನ್ನುವುದು ಇನ್ನೂ ಅನಿರುದ್ಧರಿಗೆ ಅರ್ಥವಾಗದೇ ಹೋದರೆ ಕನ್ನಡಿಗರು ಸ್ವಲ್ಪದರಲ್ಲೇ ಬೆಳ್ಳಿ ತೆರೆಯಮೇಲೆ ಇವರ ನಿರ್ದೇಶನದ ಚಿತ್ರವನ್ನು ಸಹಿಸಿಕೊಳ್ಳಬೇಕಾದ ದುರಂತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಇಂತಿಪ್ಪ ಫುಲ್‍ಟೈಂ ಫ್ರೀ ಇರುವ ಅನಿರುದ್ಧ್ ಟೈಂಪಾಸಿಗಾಗಿ ಇತ್ತೀಚಿಗೆ ಆರು ಕಿರುಚಿತ್ರಗಳನ್ನು ನಿರ್ದೇಶಿಸಿ, ಅದರ ಪ್ರದರ್ಶನಕ್ಕಾಗಿ ಪ್ರೆಸ್‍ಮೀಟ್ ಒಂದನ್ನು ಕರೆದು `ತಾನು ಖಾಲಿತಲೆ ಕಿಸ್‍ಬಾಯಿ ದಾಸ’ ಅನ್ನುವುದನ್ನು ಪ್ರೂವ್ ಮಾಡಿಕೊಂಡಿದ್ದಾರೆ. ಆರು ಕಿರುಚಿತ್ರಗಳು ಇಪ್ಪತ್ತು ನಿಮಿಷ ಅವಧಿಯಲ್ಲಿ ಮುಗಿದು ಹೋಗುತ್ತದೆ. ಆದರೆ, ಒಂದು ನಿಮಿಷವೂ ಚಿತ್ರಗಳ ಒಂದು ಸೀನ್‍ಗಳೂ ನೆನಪಿರುವುದಿಲ್ಲ. ಪಾಪ ಬಾವಿಯೊಳಗಿನ ಕಪ್ಪೆಯಂತಿರುವ ಅನಿರುದ್ಧ್ ತಪ್ಪು ಇದರಲ್ಲಿ ಇಲ್ಲ ಬಿಡಿ. ಏಕೆಂದರೆ, ಇನ್ನೂ ಮೀಸೆ ಚಿಗರುದ ಯುವಕರು ನಿಮಿಷವೊಂದರಲ್ಲಿ ಅದ್ಭುತ ಕತೆಯನ್ನು ಕಟ್ಟಿಕೊಡುವ ಕಿರುಚಿತ್ರವನ್ನು ಇವರು ನೋಡಿರಲಿಕ್ಕಿಲ್ಲ. ಇನ್ನು, ಇವರ ಚೊಚ್ಚಲ ಕಿರುಚಿತ್ರಗಳ ಲೈಟಿಂಗ್, ಸೌಂಡ್… ಹೀಗೆ ಟೆಕ್ನಿಕಲ್ ವಿಚಾರಗಳ ಬಗ್ಗೆ ಮಾತಾಡದೇ ಇರೋದೆ ಒಳಿತು. ಪ್ರದರ್ಶನದ ನಂತರ ಮಾತನಾಡಿದ ಹಿರಿಯ ನಿರ್ದೇಶಕ ಭಾರ್ಗವ, `ಅನಿರುದ್ಧ್‍ಗೆ ಕಿರುಚಿತ್ರ ಯಾಕೆ ಹಿರಿಚಿತ್ರವನ್ನು ನಿರ್ದೇಶಿಸುವ ಎಲ್ಲಾ ಅರ್ಹತೆ ಇದೆ, ಸದ್ಯದಲ್ಲೇ ಅದು ನೇರವೇರುತ್ತದೆ..’ ಎಂಬ ಬಾಂಬ್ ಹಾಕಿದರು. ಆಗಷ್ಟೇ ಕಿರುಚಿತ್ರ ನೋಡಿದ ಪ್ರೇಕ್ಷಕರು `ಇದೊಂದು ದುರಂತ ಬೇಕಾ..’ ಅಂತಂದದ್ದು ಅನಿರುದ್ಧ್‍ಗೆ ಪಾಪ ಕೇಳಿಸಲಿಲ್ಲ. ಕಿರುಚಿತ್ರ ನೋಡಿದ ಇನ್ನೊಬ್ಬರು ಹಿರಿಯ ನಿರ್ದೇಶಕರಾದ ಎಮ್.ಎಸ್.ಸತ್ಯು ಕಿರುಚಿತ್ರದ ಯೋಗ್ಯತೆಯನ್ನು ಮನಗಂಡು, ಚಿತ್ರಗಳ ಬಗ್ಗೆ ಮಾತಾನಾಡುವುದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳ ಬಗ್ಗೆ ಮಾತನಾಡಿದರು. ಒಟ್ಟಿನಲ್ಲಿ, ತನ್ನನ್ನು ತಾನು ನಿರ್ದೇಶಕ ಎಂದು ಬಿಂಬಿಸುವ ದರ್ದು ಅನಿರುದ್ಧ್‍ಗೆ ಯಾಕೆ ಹೊಳೆಯಿತೋ ಗೊತ್ತಿಲ್ಲ.
ತಾನೊಂದು ಪ್ರತಿಷ್ಠಿತ ಫ್ಯಾಮಿಲಿಗೆ ಸೇರಿದೋನು ಅನ್ನುವ ಕಿಂಚಿತ್ತೂ ಅರಿವಿದಲ್ಲದೆ, ಯಾವುದೇ ಪೂರ್ವ ತಯಾರಿಯಿಲ್ಲದೆ ತನ್ನ ಮನಸ್ಸಿಗೆ ತೋಚಿದ ಹಾಗೆ ಸುತ್ತಿರುವ ಕಿರುಚಿತ್ರಗಳು ಯಾವ ಪುರುಷಾರ್ಥಕ್ಕೆ? ಅದಕ್ಕೇಂದೆ, ಚಿತ್ರದ ಬಗ್ಗೆ ಭಾರತಿ ವಿಷ್ಣುವರ್ಧನ್ ಅವರು `ಹೆತ್ತವರಿಗೆ ಹೆಗ್ಗಣ ಮುದ್ದು’ ಎಂದಷ್ಟೇ ಅಂದು ಸುಮ್ಮನಾಗಿದ್ದು. ಭಾರತಿಯವರು ಹೇಳಿದ್ದರಲ್ಲಿ ಗಾಢ ಅರ್ಥವಿದೆ, ಹೆತ್ತವರಿಗೆ ಮುದ್ದಾಗಿರುವ ಕಿರುಚಿತ್ರಗಳನ್ನು ಅವರಷ್ಟೇ ನೋಡಿ ಎಂಜಾಯ್ ಮಾಡಬಹುದು. ಎನೀಹೌ.. ಸಿನಿಮಾ ನಿರ್ದೇಶನ ಬಗ್ಗೆ ಒಂದು ಹನಿಯಷ್ಟೂ ಪ್ರತಿಭೆಯಿಲ್ಲದ ಅನಿರುದ್ಧ್ ಇನ್ನಾದರು, ಭಾರ್ಗವರಂತೆ ಹೊಗಳಿ ಶೂಲಕ್ಕೇರಿಸುವವರೊಡಗೂಡಿ ಭ್ರೆಮೆಯಿಂದ ಹೆಂಗೆಂಗೋ ಆಡುವುದನ್ನು ಬಿಟ್ಟು.. ಒಂದುವರ್ಷಗಳ ಕಾಲ ಸುದೀರ್ಘ ಬ್ರೇಕ್ ತಗೊಂಡು ಸಿನಿಮಾ ನಿರ್ದೇಶನದ ಆಳ-ಅಗಲ ತಿಳಿದುಕೊಳ್ಳುವುದು ಒಳಿತು. ಬಿಕಾಸ್, ವಿಷ್ಣುದಾದ ಫ್ಯಾಮಿಲಿಯಿಂದ ಕನ್ನಡ ಪ್ರೇಕ್ಷಕರು `ದಿಬೆಸ್ಟ್’ ಅನ್ನೇ ನಿರೀಕ್ಷಿಸುತ್ತಾರೆ. ಇಂತಹ ಕಳಪೆ ಕಿರುಚಿತ್ರಗಳ ಮೂಲಕ, ಡೈರೆಕ್ಟರ್ ಕಾರ್ಡನಲ್ಲಿ ದೊಡ್ಡಾದಾಗಿ ಪೋಸ್ ಕೊಡುತ್ತಾ ಮತ್ತೆ ನಮ್ಮ ಎದುರಾಗುವುದಿಲ್ಲ ಎಂಬ ನಂಬಿಕೆಯಲ್ಲಿದ್ದೇವೆ. ನಂಬಿಕೆ ಹುಸಿಯಾಗದಿರಲಿ!
Be the first to comment