ರಾಮಾಯಣದ ಆನಿಮೇಟೆಡ್ ಸಿನಿಮಾ ‘ರಾಮಾಯಣ; ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಅ.18ಕ್ಕೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ.
ಈ ಕುರಿತು ಗ್ರೀಕ್ ಪಿಕ್ಚರ್ಸ್ ಇಂಡಿಯಾ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿದೆ. ಹಿಂದಿ, ಇಂಗ್ಲೀಷ್, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಮೂರು ದಶಕಗಳ ಬಳಿಕ ಅ.18ರಂದು ಮತ್ತೆ ಬಿಡುಗಡೆಯಾಗುತ್ತಿದೆ.
ಈ ಚಿತ್ರವನ್ನು ಜಪಾನ್‌ನ ಯುಗೋ ಸಾಕೋ ಮತ್ತು ಭಾರತದ ರಾಮ್ ಮೋಹನ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಎರಡೂ ದೇಶಗಳ ಅನಿಮೇಷನ್ ಶೈಲಿಗಳನ್ನು ಮಿಶ್ರಣ ಮಾಡಲಾಗಿದೆ. ಚಿತ್ರವು, ರಾಕ್ಷಸ ರಾಜ ರಾವಣನಿಂದ ಅಪಹರಿಸಲ್ಪಟ್ಟ ತನ್ನ ಹೆಂಡತಿ ಸೀತೆಯನ್ನು ರಕ್ಷಿಸಲು ವಿಷ್ಣುವಿನ ಅವತಾರವಾದ ರಾಮನ ಪ್ರಯಾಣದ ಕಥಾಹಂದರವನ್ನು ಹೊಂದಿದೆ.
ಇದೊಂದು ಜಪಾನೀಸ್-ಇಂಡಿಯನ್ ಆನಿಮೇಟೆಡ್ ಸಿನಿಮಾವಾಗಿದೆ. 1992ರಲ್ಲಿ ಮೊದಲ ಬಾರಿಗೆ ಸಿನಿಮಾ ಬಿಡುಗಡೆಯಾಗಿತ್ತು.
Be the first to comment