‘ಪಲ್ಲವಿ ಅನು ಪಲ್ಲವಿ’ ನೆನಪಿಸಿಕೊಂಡ ಅನಿಲ್ ಕಪೂರ್

ಕನ್ನಡ ಚಿತ್ರ ‘ಪಲ್ಲವಿ ಅನು ಪಲ್ಲವಿ’  42 ವರ್ಷ ಪೂರೈಸಿದೆ. ನಟ ಅನಿಲ್ ಕಪೂರ್ ‘ಪಲ್ಲವಿ ಅನು ಪಲ್ಲವಿ’  ಚಿತ್ರದ ಸಂಗೀತವು ಶಾಶ್ವತವಾಗಿ ಉಳಿದಿದೆ ಎಂದಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅನಿಲ್ ಕಪೂರ್, ಪಲ್ಲವಿ ಅನು ಪಲ್ಲವಿ ಚಿತ್ರದ ಸಣ್ಣ ಕ್ಲಿಪ್   ಹಂಚಿಕೊಂಡಿದ್ದಾರೆ. ’42 ವರ್ಷ ಕಳೆದಿದೆ ಮತ್ತು ಇಳಯರಾಜ ಸರ್ ಅವರ ಮಧುರ ಗೀತೆಗಳು ಇನ್ನೂ ಶಕ್ತಿಯುತವಾಗಿ ಪ್ರತಿಧ್ವನಿಸುತ್ತಿವೆ. ಪಲ್ಲವಿ ಅನು ಪಲ್ಲವಿ ಚಿತ್ರ 42 ವರ್ಷಗಳನ್ನು ಪೂರೈಸಿದೆ. ಆದರೆ ಚಿತ್ರದ ಸಂಗೀತವು  ‘ಕಾಲಾತೀತ’ !’ ಎಂದು ಬರೆದಿದ್ದಾರೆ.

ಈ ಚಿತ್ರದ ಮೂಲಕ ಮಣಿರತ್ನಂ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಚಿತ್ರಕ್ಕೆ ತಮಿಳು ಚಿತ್ರರಂಗದ ಮತ್ತೊಬ್ಬ ದಿಗ್ಗಜ ಬಾಲು ಮಹೇಂದ್ರ ಅವರ ಛಾಯಾಗ್ರಹಣ, ಬಿ ಲೆನಿನ್ ಅವರ ಸಂಕಲನವಿದೆ. ಚಿತ್ರಕ್ಕೆ ಇಳಯರಾಜ ಅವರ ಸಂಗೀತ ಸಂಯೋಜನೆಯಿತ್ತು.

1983ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನಿಲ್ ಕಪೂರ್, ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು.  ಮಣಿರತ್ನಂ ಅವರಿಗೆ ಅತ್ಯುತ್ತಮ ಚಿತ್ರಕಥೆ  ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬಾಲು ಮಹೇಂದ್ರ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!