ಚಿತ್ರ ವಿಮರ್ಶೆ : ಅನಿಶ್ ಎಡವಿದ್ದೆಲ್ಲಿ ಗೊತ್ತಾ?! ‘ರಾಮ’ನ ಹೆಸ್ರಲ್ಲಿ ‘ನಾರಾಯಣ’ ದುಡುಕಿದ್ನಾ!

ಚಿತ್ರ: ರಾಮಾರ್ಜುನ

ನಿರ್ದೇಶನ: ಅನಿಶ್ ತೇಜೇಶ್ವರ್

ಕಲಾವಿದರು: ಅನಿಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಹರೀಶ್ ರಾಜ್, ಶರತ್ ಲೋಹಿತಾಶ್ವ ಮತ್ತು ಇತರರು

ಬಿಡುಗಡೆ: ಜನವರಿ 29, 2021

ಬಿಸಿಮಾಸ್ ರೇಟಿಂಗ್ : 2/5

ನಮಸ್ಕಾರ ಓದುಗರೆ. ಇವತ್ತು ನಾವು ವಿಮರ್ಶೆ ಮಾಡ್ತಿರೋ ಚಿತ್ರ ಅನಿಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ‘ರಾಮಾರ್ಜುನ’ ಚಿತ್ರ. ಸಿನಿಮಾದ ಬಗ್ಗೆ ಹೇಳೋ ಮೊದ್ಲು ಕೊರೋನಾ ನಂತ್ರ ಜನ ಸಿನಿಮಾನ ಹೇಗೆ ರೀಸಿವ್ ಮಾಡಿದ್ದಾರೆ ಅನ್ನೊದರ ಬಗ್ಗೆ ಹೇಳ್ಳೇಬೇಕು. ಕೊರೋನಾದಿಂದ ಬೇಸತ್ತ ಜನ ಥೀಯೆಟರ್‌ಗೆ ಮೈಚಳಿ ಬಿಟ್ಟು ಬರ‍್ತಿದ್ದಾರೆ. ಅದಕ್ಕೆ ಸಾಕ್ಷಿ ರಾಮಾರ್ಜುನ ಸಿನ್ಮಾ. ಪ್ರೇಕ್ಷಕನ ಈಗಿನ ಮನಸ್ಥಿತಿಯಲ್ಲಿ ಯಾವ ಚಿತ್ರ ತರೆಕಂಡ್ರು ಒಳ್ಳೇ ಓಪನಿಂಗ್ ತಗೋಳೋದು ಗ್ಯಾರಂಟಿ. ಸಿನಿಮಾ ನೋಡಿದ ಜನ ಇಷ್ಟ ಪಟ್ರೆ ಸಿನಿಮಾ ಹಿಟ್ ಪಕ್ಕಾ. ಆದ್ರೆ ರಾಮಾರ್ಜುನ ಚಿತ್ರದ ವಿಷ್ಯಕ್ಕೆ ಬಂದ್ರೆ, ಮೊದಲ ಶೋಗೆ ಅರ್ಧ ಥೀಯೆಟರ್ ಫುಲ್ ಆಗಿದ್ರೂ..ಎರಡನೇ ಶೋಗೆ ಖಾಲಿ ಖಾಲಿ. ಯಾಕಿರ‍್ಬಹುದು?.. ಮುಂದೆ ಓದಿ.

ಅನಿಶ್, ರಾಮಾರ್ಜುನ ಮೂಲಕ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡದ್ದು ನಿಜ, ಆದರೆ ಅದಕ್ಕೆ ಅವರು ಆರಿಸಿಕೊಂಡ ಮಾರ್ಗ ಜಸ್ಟ್ ಮನೋರಂಜನೆ ಮಾತ್ರ ಎಂಬುದು ನಿರಾಸೆ ಮೂಡಿಸುವ ಅಂಶ. ಹೌದು, ಚಿತ್ರದಲ್ಲಿ ಕಂಟೆಂಟ್ ಬಿಟ್ಟು ಉಳಿದದ್ದೆಲ್ಲಾ ದಂಢಿಯಾಗಿದೆ. ಈ ಚಿತ್ರ ಒಂಥಾರಾ ಮೆದುಳೇ ಇಲ್ಲದ ಮನುಷ್ಯನ ಥರ!

ಅನೀಶ್ ತೆರೆಯೆ ಮೇಲೆ ಮಾಡಿರೋ ಸರ್ಕಸ್ ನೋಡಿದರೆ ಅವರ ಬಗ್ಗೆ ಅನುಕಂಪ ಹುಟ್ಟುತ್ತದೆಯೇ ಹೊರತು ಮೆಚ್ಚುಗೆ ಹುಟ್ಟುವುದಿಲ್ಲ. ತನ್ನ ಮೊದಲ ಚಿತ್ರವನ್ನು ‘ನೋಬೆಲ್’ ಚಿತ್ರವಾಗದಿದ್ದರೂ ಪರ‍್ವಾಗಿಲ್ಲ ಒಂದು ‘ನೋಡೆಬಲ್’ ಚಿತ್ರವನ್ನಾದರೂ ಮಾಡಬೇಕು ಎಂದು ಅನೀಶ್ ಪಟ್ಟ ಪಾಡು ಚಿತ್ರದ ಪ್ರತೀ ಫ್ರೇಮ್‌ನಲ್ಲೂ ಕಾಣುತ್ತದೆ. ಕೊನೆಗೂ, ಇದೊಂದು ಅನೀಶ್ ಚಿತ್ರವಾಗುವುದಿಲ್ಲ, ಈಗಾಗಲೇ ನೀವು ಬೇರೆಭಾಷೆಯಲ್ಲಿ ನೋಡಿರೋ ಚಿತ್ರಗಳ ಚೌಚೌಬಾತ್ ಅಷ್ಟೇ! ಬಹಳ ದಿನಗಳ ನಂತ್ರ ಒಂದು ಡಿಫೆರೆಂಟ್ ಚಿತ್ರ ಬಂದಿದೆ.. ಎಂದು ನೀವು ಥೀಯೆಟರ್ ಹೋದ್ರೆ ನೀವು ಡಿಸಾಪೈಂಟ್ ಆಗ್ತೀರಿ. ಬದಲಾಗಿ.. ಒಂದು ಮನೋರಂಜನೆ ಬೇಕು.. ಬೇಕಾದಷ್ಟು ಫ್ರೀ ಟೈಂ ಇದೆ..ಟೈಂ ಪಾಸ್ ಆಗ್ತಿಲ್ಲ.. ಅನ್ನೋದು ನಿಮ್ಮ ಗೋಳಾದರೆ ‘ರಾಮಾರ್ಜುನ’ನ್ನು ಮೀಟ್ ಮಾಡ್ಬಹುದು.
‘ಎಲ್ಲಾ ನಾನೇ ಮಾಡ್ತೀನಿ’ ಅಂತ ಸಾಕಷ್ಟು ರಿಸ್ಕ್ ತೆಗೆದುಕೊಂಡಿರುವ ಅನೀಶ್‌ಗೆ ರಾಮಾರ್ಜುನ ಮೂಲಕ ಮುಂದೆ ‘ಏನ್ಮಾಡ್ಬೇಕು’ ಅನ್ನೋದಕ್ಕಿಂತ ಎನು ‘ಮಾಡ ಬಾರದು’ ಅನ್ನೋದರ ಬಗ್ಗೆ ಒಂದು ಕ್ಲಿಯರ್ ಪಿಕ್ಚರ್ ಸಿಕ್ಕಿರುತ್ತೆ. ಈ ನಿಟ್ಟಿನಲ್ಲಿ ಚಿತ್ರ ಅನೀಶ್‌ರನ್ನು ಸಾಕಷ್ಟು ಮಾಗಿಸಿಬಹುದು. ಚಿತ್ರದ ಫಸ್ಟ್ಆಫ್‌ನ್ನು ಅನೀಶ್‌ರ ‘ಡೈರೆಕ್ಷನ್ ಕೋರ್ಸ್’ ಎಂದು ಪರಿಗಣಿಸಿ, ಸೆಕೆಂಡ್‌ಹಾಫ್‌ನ್ನು ಒಂದು ‘ಪ್ರಯತ್ನ’ ಎಂದು ಪರಿಗಣಿಸುವುದಾದರೇ ಅವರ ಶ್ರಮ ಸೂಪರ್ ಅನ್ಸುತ್ತೆ.
ಸಿನಿಮಾದ ಕಥೆ ಏನಾಪ್ಪಾಂದ್ರೆ, ಸಿನಿಮಾದ ಹಿರೋ ಅವನಿರೋ ಏರಿಯಾದಲ್ಲಿ ನಡೀತಿರೋ ಅನ್ಯಾಯದ ವಿರುದ್ಧ ಸಿಡಿದೇಳುವ ಸೂಪರ್‌ಮ್ಯಾನ್. ಈಗ ಹೇಳಿ ಇಂತದ್ದದ್ದೊಂದು ಕಥಾಹಂದರದ ಚಿತ್ರ ಎಷ್ಟು ಬಂದು ಹೋಗಿಲ್ಲ? ಹೌದು, ಇಂಟರ್‌ವಲ್ ಬರೋವಾಗ ಅನಿಶ್ ಒಂದು ಟ್ವಿಸ್ಟ್ ಇಟ್ಟಿದಾರೆ. ಆದ್ರೆ ಅದೇ ಟ್ವಿಸ್ climax ಹಂತಕ್ಕೆ ಬರೋವಾಗ ‘ಇಷ್ಟೇನಾ’ ಅನ್ನಿಸಿಬಿಡುತ್ತೆ. ನಟಿ ನಿಶ್ವಿಕಾ, ನಿಶ್ಚಿತವಾಗಿ ಒಂದೊಳ್ಳೆ ನಟಿಯಾಗುವ ಎಲ್ಲಾ ಲಕ್ಷಣವಿದೆ. ಇವರ ನಗು ಬಾರದ ದೆವ್ವದ ಕಾಮಿಡಿ ಬಿಟ್ಟರೆ ಉಳಿದಂತೆ ಅನಿಶ್ ಒದ್ದಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ರಂಗಾಯಣ ರಘು performance ಚಿತ್ರದ ಹೈಲೈಟ್. ಇನ್ನು, ಸಾಕಷ್ಟು ಕಲಾವಿದರಿದ್ದಾರೆ.. ಅವರೆಲ್ಲಾ ತರೆಯ ಮೇಲೆ ಬಂದಷ್ಟೇ ವೇಗವಾಗಿ ಮರೆಯಾಗುತ್ತಾರೆ. ಆ್ಯಕ್ಷನ್‌ಗಳ ವಿಚಾರಕ್ಕೆ ಬರೋದಾದ್ರೆ.. ಎನೂ ಹೊಸತನವಿಲ್ಲ. ಎಲ್ಲಾ ಕಮರ್ಶಿಯಲ್ ಸಿನಿಮಾಗಳಂತೆಯೇ ಇಲ್ಲೂ 3-4 ಫೈಟ್ ಇದೆ. ಇದರಿಂದ ಅನಿಶ್‌ಗೆ ರಿಮೇಕ್/ಡಬ್ಬಿಂಗ್‌ಗೆ ಹೆಲ್ಪ್ ಆಗಬಹುದೇನೋ. ಅನೀಶ್‌ಗೂ ಕ್ಯಾಮರಾಮೆನ್‌ಗೂ ನಡುವಿನ ಅಂಡರ್‌ಸ್ಟಾಡಿಂಗ್ ಅಲ್ಲಲ್ಲಿ ಕೈಕೊಟ್ಟಿದೆ. ಬಿಜಿಎಮ್‌ನಲ್ಲಿ ಸ್ಪೆಶಲ್ ಎನೂ ಇಲ್ಲ. ಎರಡು ಸಾಂಗ್‌ಗಳು ಸೂಪರ್, ಅದರಲ್ಲೂ climax ಲೀಡ್ ಸಾಂಗ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿ finally ಟುಸ್ ಮಾಡುತ್ತದೆ. ಒಟ್ಟಿನಲ್ಲಿ ನೀವು ಕೊಟ್ಟ ಕಾಸಿಗೆ ದುಪ್ಪಟ್ಟು ಮನೋರಂಜನೆ ಕೊಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಅನಿಶ್ ‘ಗುಂಪಿನಲ್ಲಿ ಗೋವಿಂದ’ ಅನ್ನುವ ಚಿತ್ರ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೊಬ್ಬರು ಮಾಡಿದ ಅಡುಗೆಯನ್ನು ಬಳಸುವುದರ ಬದಲು ತಾವೇ ಅಡುಗೆ ಮಾಡಿ ಬಳಸಿದರೆ ಒಳ್ಳೆಯದು. ಚಿತ್ರ ನೋಡಿ ನಿವೇನಂತಿರೋ?!

ಕೊನೆಯ ಮಾತು; ಚಿತ್ರ ನೋಡಿದ ಮೇಲೂ ಬಂಡವಾಳ ಹೂಡಿದ್ದ ರಕ್ಷಿತ್ ಶೆಟ್ಟಿಯನ್ನು ಯಾರು ರಕ್ಷಿಸುತ್ತಾರೋ.. ಛೇ ‘ರಾಮಾರ್ಜುನ’ನ ಹೆಸರಲ್ಲಿ ನಮ್ಮ ‘ನಾರಾಯಣ’ ದುಡುಕಬಾರದಿತ್ತು.

@ಬಿಸಿನಿಮಾಸ್ ಡಾಟ್ ಇನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!