‘ಪಿಸಾಸು 2’ ಸಿನಿಮಾಕ್ಕಾಗಿ ಬೆತ್ತಲೆ ದೃಶ್ಯದಲ್ಲಿ ನಟಿಸಬೇಕು ಎಂದಿದ್ದರೆ ನಾನು ಹಿಂಜರಿಯದೆ ನಟಿಸುತ್ತಿದ್ದೆ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಗಾಯಕಿ ಆಂಡ್ರಿಯಾ ಜೆರ್ಮಿಯಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಪಿಸಾಸು 2’ ಸಿನಿಮಾದಲ್ಲಿ ಬೆತ್ತಲೆ ದೃಶ್ಯಗಳಿವೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಆಂಡ್ರಿಯಾ ಜೆರ್ಮಿಯಾ ಸ್ಪಷ್ಟನೆ ನೀಡಿದ್ದಾರೆ.
‘ಪಿಸಾಸು 2’ ಚಿತ್ರದ ಚಿತ್ರೀಕರಣದ ಆರಂಭಿಕ ಹಂತದಲ್ಲಿ ಕೆಲವು ಬೆತ್ತಲೆ ದೃಶ್ಯಗಳು ಚಿತ್ರಕಥೆಯಲ್ಲಿ ಇದ್ದವು. ಆದರೆ ನಿರ್ದೇಶಕ ಮಿಸ್ಕಿನ್ ಅವರ ಮಾರ್ಗದರ್ಶನದಲ್ಲಿ ಅವುಗಳನ್ನು ತೆಗೆದು ಹಾಕಲಾಗಿದೆ. ಸಿನಿಮಾಕ್ಕಾಗಿ ಬೆತ್ತಲೆ ದೃಶ್ಯದಲ್ಲಿ ನಟಿಸಬೇಕು ಎಂದಿದ್ದರೆ ನಾನು ಹಿಂಜರಿಯದೆ ನಟಿಸಿರುತ್ತಿದ್ದೆ. ಚಿತ್ರದಲ್ಲಿ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆ. ಚಿತ್ರದ ಚಿತ್ರೀಕರಣ ಈಗ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಕೆಲವು ತಿಂಗಳೊಳಗೆ ಚಿತ್ರ ಬಿಡುಗಡೆ ಆಗಲಿದೆ’ ಎಂದಿದ್ದಾರೆ.
‘ಪಿಸಾಸು 2’ ಸಿನಿಮಾದಲ್ಲಿ ಆಂಡ್ರಿಯಾ ಜೆರ್ಮಿಯಾ ಜೊತೆಗೆ ವಿಜಯ್ ಸೇತುಪತಿ ಮತ್ತು ರಾಜ್ಕುಮಾರ್ ಪಿಚ್ಚುಮನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಂಡ್ರಿಯಾ ಸೂಪರ್ ಹಿಟ್ ಸಿನಿಮಾಗಳಾದ ‘ಆಯರತ್ತಿಲ್ ಒರುವನ್’, ‘ವಿಶ್ವರೂಪಂ’, ‘ವಡ ಚೆನ್ನೈ’, ‘ಮಂಕತ್ತ’, ‘ಅನ್ನಯಂ ರಸೂಲುಂ’, ‘ಉತ್ತಮ ವಿಲನ್’, ‘ಮಾಸ್ಟರ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಪಿಸಾಸು 2’ ನಿರ್ದೇಶಕ ಮಿಸ್ಕಿನ್ ‘ತುಪ್ಪರಿವಾಲನ್’, ‘ಸೈಕೊ’, ‘ಪಿಸಾಸು’, ‘ಮುಗಮುಡಿ’ ಮೂಲಕ ಹೆಸರು ಮಾಡಿದ್ದಾರೆ.
—-





Be the first to comment