“ಈ ಹಿಂದೆ ಭಾರತ ಸುರಕ್ಷಿತವಲ್ಲ ಎಂದು ಹೇಳಿದ್ದ ನಟರು ಈಗ ಅಫ್ಘಾನಿಸ್ತಾನಕ್ಕೆ ಹೋಗಲಿ. ಅಲ್ಲಿನ ಸ್ವರ್ಗದಲ್ಲಿ ಆರಾಮವಾಗಿ ಜೀವನ ಮಾಡಲಿ ” ಎಂದು ಹಿರಿಯ ನಟ ಅನಂತ್‌ನಾಗ್ ಟೀಕೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು,
“ಇಲ್ಲಿ ಕೆಲವು ನಟರು ನಮಗೆ ಸೆಕ್ಯುರಿಟಿ ಇಲ್ಲ. ಭಾರತದಲ್ಲಿ ಇರಲು ಭಯವಾಗ್ತಿದೆ ಎಂದಿದ್ದರು. ಅಂಥವರು ಆರಾಮವಾಗಿ ಅಫ್ಘಾನಿಸ್ತಾನಕ್ಕೆ ಹೋಗಬಹುದು” ಎಂದು ಕುಟುಕಿದರು.
“ಉಗ್ರರಿಂದ ತಪ್ಪಿಸಿಕೊಳ್ಳಲು ಜನರು ತಮ್ಮ ಕುಟುಂಬದವರನ್ನೂ ಬಿಟ್ಟು ವಿಮಾನಗಳ ಹಿಂದೆ ಓಡುತ್ತಿದ್ದಾರೆ. ವಿಮಾನದಿಂದ ಕೆಳಗೆ ಬಿದ್ದು ಕೆಲ ಜನ ಸತ್ತಿದ್ದಾರೆ. ಈ ವಿಷಮ ಪರಿಸ್ಥಿತಿಯಲ್ಲಿ ಸಹಾಯ ಮಾಡಬೇಕು ಎಂದು ಮೋದಿ ಅವರು ಮುಸಲ್ಮಾನರಿಗೆ 180 ದಿನದ ವೀಸಾ ಕೊಡುತ್ತೇವೆ ಎಂದು ಘೋಷಿಸಿದ್ದಾರೆ” ಎಂದರು.
” ತಾಲಿಬಾನ್ ಸರ್ಕಾರ ಬಂದಿರುವ ಕಾರಣ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ವಿಷಯ ನಮ್ಮ ಭದ್ರತಾ ಮುಖ್ಯಸ್ಥರಿಗೂ ತಿಳಿದಿದ್ದು ಅವರು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಹಿಂದೆ ಏನು ಆಗಬೇಕಾದದ್ದು ಆಗಿರಲಿಲ್ಲವೊ ಅದು ಮೋದಿ ಅವರ ನೇತೃತ್ವದಲ್ಲಿ ಆಗುತ್ತದೆ. ಮೋದಿ ಮಾಡಿ ತೋರಿಸುತ್ತಾರೆ ಎಂಬ ನಂಬಿಕೆ ನನ್ನದು” ಎಂದು ಅನಂತನಾಗ್ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ನಟ ಅಮೀರ್ ಖಾನ್ ಅವರು ಭಾರತದಲ್ಲಿ ಅಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ದರು. ಆಗ ಕೆಲ ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸಿದ ಪ್ರಮೇಯವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅನಂತನಾಗ್ ಅವರು ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
_____________
Be the first to comment