‘ಅಮೃತವಾಹಿನಿ’ ಚಿತ್ರದ ಆಡಿಯೋ ಬಿಡುಗಡೆ

ಹಿರಿಯ ಸಾಹಿತಿ, ಕವಿ ಹೆಚ್​​​.ಎಸ್​. ವೆಂಕಟೇಶಮೂರ್ತಿ ತಾವು ನಿರ್ದೇಶಿಸಿರುವ ‘ಹಸಿರು ರಿಬ್ಬನ್​​​’ ಚಿತ್ರಕ್ಕಾಗಿ ಇತ್ತೀಚೆಗೆ ಫಿಲ್ಮ್​​​​ಫೇರ್ ಪ್ರಶಸ್ತಿ ಪಡೆದವರು. ಇದೀಗ ‘ಅಮೃತವಾಹಿನಿ’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನರೇಂದ್ರ ಬಾಬು ನಿರ್ದೇಶನದ ‘ಅಮೃತವಾಹಿನಿ’ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಸಿನಿಮಾ ಪಾತ್ರಕ್ಕಾಗಿ ಹೆಚ್​​​.ಎಸ್​​​.ವಿ ಸುಮಾರು 12 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಚಿತ್ರೀಕರಣದ ವೇಳೆ ಉಂಟಾದ ಅನುಭವವನ್ನು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಸ್ತಮಾ ಕಾಯಿಲೆ ಇರುವ ವೃದ್ಧನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಪಾತ್ರಕ್ಕಾಗಿ ಹೆಚ್​​​ಎಸ್​​​​ವಿ ಅವರಿಗೆ ಕೆಮ್ಮುವುದು ಬಹಳ ಕಷ್ಟವಾಗಿತ್ತಂತೆ. ನಿರ್ದೇಶಕ ನರೇಂದ್ರ ಬಾಬು ಕ್ಯಾಮೆರಾ ಹಿಂದೆ ನಿಂತು ಕೆಮ್ಮಿದಾಗ ಹೆಚ್​​​​​ಎಸ್​​ವಿ ಅವರಿಗೆ ಜ್ಞಾಪಕ ಬಂದು ಕೆಮ್ಮಲು ಶುರು ಮಾಡುತ್ತಿದ್ದರಂತೆ. ಅದರಲ್ಲೂ ಆ ಕೆಮ್ಮು ವಿಭಿನ್ನವಾಗಿ ಬರಬೇಕಿತ್ತಂತೆ. ಆದರೆ ಸಣ್ಣದಾಗಿ, ಮಧ್ಯಮ, ತಾರಕದಲ್ಲಿ ಕೆಮ್ಮುವುದು ಅವರಿಗೆ ಅಷ್ಟು ಸಲೀಸಾಗಿ ಬರಲಿಲ್ಲ ಎಂದು ಹೆಚ್​​ಎಸ್​ವಿ ಹೇಳಿಕೊಂಡಿದ್ದಾರೆ.ಇದುವರೆಗೂ ಬರವಣಿಗೆಯಲ್ಲಿ ಬ್ಯುಸಿಯಾಗಿದ್ದ ನಾನು ಈಗ 76ನೇ ವಯಸ್ಸಿನಲ್ಲಿ ಅಭಿನಯಿಸಿದ್ದೇನೆ. ಕ್ಯಾಮೆರಾ ಮುಂದೆ ಅಭಿನಯಿಸುವುದು ಕಷ್ಟವೇನಲ್ಲ. ಆದರೆ ಇಂತಹ ಕೆಲವೊಂದು ಸನ್ನಿವೇಶಗಳು ಸುಸ್ತು ಮಾಡಿಬಿಡುತ್ತದೆ. ನನ್ನೊಂದಿಗೆ ಅಭಿನಯಿಸಿರುವ ಬಾಲನಟಿ ಋತ್ವಿಕ, ಮನಮುಟ್ಟುವಂತೆ ಅಭಿನಯಿಸಿದ್ದಾಳೆ ಎಂದು ತಮ್ಮ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ ಹೆಚ್​​​ಎಸ್​​ವಿ. ‘ಅಮೃತ ವಾಹಿನಿ’ ಚಿತ್ರವನ್ನು ಕೆ. ಸಂಪತ್​ ಕುಮಾರ್, ಅಕ್ಷಯ್ ರಾವ್ ಸೇರಿಸಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಉಪಾಸನಾ ಮೋಹನ್​​​​ ಸಂಗೀತ ನಿರ್ದೇಶನವಿದ್ದು, ಗಿರಿಧರ್ ದಿವಾನ್ ಛಾಯಾಗ್ರಹಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!