‘ಅಮೃತಮತಿ’ ಆಡಿಯೋ ಸಿ.ಡಿ ಬಿಡುಗಡೆ

ಜನಪ್ರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅಮೃತಮತಿ‌ ಚಿತ್ರದ ಹಾಡುಗಳನ್ನು ಬಿಡಗಡೆಗೊಳಿಸಿದರು. ಚಿತ್ರದ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪನವರು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು  ನೀಡಿದರು.
“13ನೇ ಶತಮಾನದಲ್ಲಿ ಜನ್ನ ಕವಿ ಬರೆದ ಜನ್ನ ಕವಿಯ ‘ಯಶೋಧರ ಚರಿತೆ’ಯನ್ನು ಆಧಾರ ಮಾಡಿಟ್ಟುಕೊಂಡು ತಯಾರು ಮಾಡಿರುವ ಚಿತ್ರ ಇದು. ಅರಮನೆ ಅಮೃತಮತಿಗೆ ಸೆರೆಮನೆ. ಹೊರಮನೆಯಲ್ಲಿನ ಕುದುರೆ ಲಾಯದವನ ಪ್ರೀತಿ ಆಕೆಯ ಆತ್ಮಸಾಕ್ಷಿಯ ಶೋಧವನ್ನು ಮಾಡುವ ಪ್ರಯತ್ನ ಮಾಡಿದ್ದೇನೆ. ” ಎಂದರು.
“ಬರಗೂರು ರಾಮಚಂದ್ರಪ್ಪನವರ ಅವರ ಚಿತ್ರಗಳು ತುಂಬ ಅರ್ಥಪೂರ್ಣವಾಗಿರುತ್ತದೆ ಎಂದು ಗೊತ್ತಿತ್ತು. ಶೂಟಿಂಗ್ ನನಗೆ ಹೊಸ ಅನುಭವ. ಚಿತ್ರೀಕರಣ ಶುರುವಾಗ ಮೊದಲು ಪ್ರತಿದಿನ ಬೆಳಿಗ್ಗೆ ಒಂದು ರೌಂಡ್ ಟೇಬಲ್ ಮಾತುಕತೆಯಲ್ಲಿ ಎಲ್ಲ ಕಲಾವಿದರನ್ನು ಸೇರಿಸಲಾಗುತ್ತಿತ್ತು. ಇದು ನನಗೆ ಹೊಸ ಅನುಭವ” ಎನ್ನುವುದು  ಚಿತ್ರದ ನಾಯಕಿ ಹರಿಪ್ರಿಯ ಮಾತು. ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಅವರು ಬರಗೂರು ಸರ್ ಅವರ ಚಿತ್ರಕ್ಕೆ ಸಂಗೀತ ನೀಡುವುದೇ ಖುಷಿಯ ವಿಚಾರ. ಇದರಲ್ಲಿ ಎರಡು ಜಾನಪದ ಗೀತೆಗಳನ್ನು ಬಳಸಿದ್ದೇವೆ. ಉಳಿದ ಗೀತೆಗಳನ್ನು ಬರಗೂರು ಸರ್ ಸ್ವತಃ  ಬರೆದಿದ್ದಾರೆ” ಎಂದರು. ಚಿತ್ರದ ನಾಯಕ ಕಿಶೋರ್ ಜತೆಗೆ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್ ಗಾಯಕರಾದ ಖಾಸಿಂ, ಜೋಗಿ ಸುನೀತಾ, ನಿರ್ಮಾಪಕ ಪುಟ್ಟಣ್ಣ,  ಮೊದಲಾದವರು ವೇದಿಕೆಯಲ್ಲಿದ್ದರು.
https://youtu.be/MQA352HrvM8
This Article Has 1 Comment
  1. Pingback: CI-CD

Leave a Reply

Your email address will not be published. Required fields are marked *

Translate »
error: Content is protected !!