ಚಿಕ್ಕಣ್ಣ ಅಭಿನಯದ ‘ಜೋಡೆತ್ತು’ ಚಿತ್ರದ ಮೂಲಕ ‘ಹನುಮಾನ್’ ಸಿನಿಮಾದ ನಟಿ ಅಮೃತಾ ಅಯ್ಯರ್ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ.
ಚೌಕ, ಕಾಟೇರಾ, ರಾಬರ್ಟ್, ದಿ ಡೆವಿಲ್ ಚಿತ್ರಗಳ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಜೋಡೆತ್ತು’ ಸಿನಿಮಾ ಚಿತ್ರೀಕರಣ ಜನವರಿ 5 ರಿಂದ ಆರಂಭವಾಗಿದೆ. ಈಗಾಗಲೇ ಅಮೃತಾ ಅಯ್ಯರ್ ತಮ್ಮ ಪಾತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಿದ್ದಾರೆ.
ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾದಲ್ಲಿ ಅಮೃತಾ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಜೋಡೆತ್ತು ಅಮೃತಾ ಅಯ್ಯರ್ ನಟನೆಯ ಚೊಚ್ಚಲ ಕನ್ನಡ ಚಿತ್ರವಾಗುವ ಸಾಧ್ಯತೆಯಿದೆ.
ಈ ಚಿತ್ರದಲ್ಲಿ ತೆಲುಗು ನಟ ಸುನಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಮತ್ತು ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಸುನಿಲ್ ಶೀಘ್ರದಲ್ಲೇ ತಮ್ಮ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಲು ಸೆಟ್ಗೆ ಸೇರುವ ನಿರೀಕ್ಷೆಯಿದೆ.
ಕೆ ಸೋಮಶೇಖರ್ ತಮ್ಮ ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ‘ಜೋಡೆತ್ತು’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಾಸ್ತಿ, ರಾಜಶೇಖರ್ ಮತ್ತು ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಮೋಹನ್ ಬಿ ಕೆರೆ ನಿರ್ಮಾಣ ವಿನ್ಯಾಸ ನಿರ್ವಹಿಸಲಿದ್ದಾರೆ.
—–





Be the first to comment