‘ಅಮೃತ್​​ ಅಪಾರ್ಟ್​ಮೆಂಟ್ಸ್​​​​​​’ಸಧ್ಯದಲ್ಲೇ ಬಿಡುಗಡೆ

ಕೊರೊನಾ ಎಫೆಕ್ಟ್​​​​ನಿಂದ ಸದ್ಯಕ್ಕೆ ಸಿನಿಮಾ ಚಿತ್ರೀಕರಣವೆಲ್ಲಾ ಬಂದ್ ಆಗಿದೆ. ಸಿನಿಮಾ ಥಿಯೇಟರ್​​​ಗಳು ಕೂಡಾ ಬಂದ್ ಆಗಿದ್ದು ಸಿನಿಪ್ರಿಯರು ಲಾಕ್ ಡೌನ್ ಯಾವಾಗ ಮುಗಿಯುವುದೋ ಎಂದು ಕಾಯುತ್ತಿದ್ದಾರೆ. ಇನ್ನು ಲಾಕ್​ ಡೌನ್ ಮುಗಿಯುತ್ತಿದ್ದಂತೆ ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಸಿನಿಮಾ ಮೊದಲು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

‘ಸಲಗ’ ಸಿನಿಮಾ ಮಾತ್ರವಲ್ಲ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗಳ ಸಾಲಿಗೆ ‘ಅಮೃತ್​​ ಅಪಾರ್ಟ್​ಮೆಂಟ್ಸ್​​​​​​’ ಕೂಡಾ ರೆಡಿಯಾಗಿದೆ. ಗುರುರಾಜ ಕುಲಕರ್ಣಿ(ನಾಡಗೌಡ) ನಿರ್ಮಿಸಿ, ನಿರ್ದೇಶಿಸಿರುವ ಈ ಸಿನಿಮಾವನ್ನು 60 ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರಿಕರಣವಾಗಿದೆ. ಅಪಾರ್ಟ್​ಮೆಂಟ ಮತ್ತು ಬೆಂಗಳೂರು ಸುತ್ತ-ಮುತ್ತ  ಚಿತ್ರೀಕರಿಸಲಾಗಿದೆ ಎಂದು ಹೇಳಿದೆ ಚಿತ್ರ ತಂಡ.

ಈ ಚಿತ್ರಕ್ಕೆ ಕಥೆ ಬರೆದಿರುವುದು ಕೂಡಾ ಗುರುರಾಜ್ ಅವರೇ . ಜಿ 9 ಕಮ್ಯುನಿಕೇಶನ್ ಎಂಟರ್​​​ಟೈನ್ಮೆಂಟ್​​​​​​​ ಬ್ಯಾನರ್​​​​​ ಅಡಿ ಈ ಸಿನಿಮಾ ತಯಾರಾಗಿದೆ. ‘ಕೆಜಿಎಫ್​​’ ಚಿತ್ರದಲ್ಲಿ ಅಭಿನಯಿಸಿರುವ ತಾರಕ್ ಪೊನ್ನಪ್ಪ, ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಅಭಿನಯಿಸಿರುವ ಬಾಲಾಜಿ ಮನೋಹರ್, ‘ಕವಲುದಾರಿ’ ಚಿತ್ರದಲ್ಲಿ ಮಂತ್ರಿಯಾಗಿ ಮಿಂಚಿದ್ದ ಸಂಪತ್ ಕುಮಾರ್ ‘ಅಮೃತ್​​ ಅಪಾರ್ಟ್​ಮೆಂಟ್ಸ್​​​​​​’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಊರ್ವಶಿ ಗೋವರ್ಧನ್ ಚಿತ್ರದಲ್ಲಿ ನಾಯಕಿ ಆಗಿ ಪರಿಚಯ ಆಗುತ್ತಿದ್ದಾರೆ.

ಚಿತ್ರದ ಹಾಡುಗಳಿಗೆ ಎಸ್​​​​​​​​​.ಡಿ. ಅರವಿಂದ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ತೇಜಸ್ ಹರಿದಾಸ್​​, ವಾಣಿ ಹರಿಕೃಷ್ಣ, ಅಜಯ್ ವಾರಿಯರ್ ಧ್ವನಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅರ್ಜುನ್ ಅಜಿತ್ ಛಾಯಾಗ್ರಾಹಣ, ಕೆಂಪರಾಜ್ ಅರಸ್ ಸಂಕಲನ ಇದ್ದು, ಡಾ. ಬಿ.ಆರ್​​​​. ಪೊಲೀಸ್ ಪಾಟೀಲ್, ಕೆ. ಕಲ್ಯಾಣ್ ಮತ್ತು ವಿ. ಮನೋಹರ್ ತಲಾ ಒಂದು ಗೀತೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಡಾ. ಸೀತಾ ಕೋಟೆ ವಕೀಲೆಯಾಗಿ, ಮಾನಸಿ ಜೋಷಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಈ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮಾಲತೇಶ್, ಜಗದೀಶ್ ಜಾಲ, ಶ್ರವಣ್ ಐತಾಳ್, ಅರುಣ ಮೂರ್ತಿ, ರಾಜು ನೀನಾಸಂ ಹಾಗೂ ಶಂಕರ್ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಹೇಶ್ ಎಸ್​​​​​.ಪಿ ಸಹ ನಿರ್ದೇಶನ, ಸುನಿಲ್ ಸಹಾಯಕ ನಿರ್ದೇಶಕ, ಹರೀಶ್ ಮೂರ್ತಿ ಕಾರ್ಯಕಾರಿ ನಿರ್ಮಾಪಕ, ಸುನಿಲ್ ಆರ್​​.ಡಿ ಮತ್ತು ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿ ತೊಡಗಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!