ಅಮೃತ ಅಂಜನ್

Movie Review: ಬದುಕಿಗೊಂದು ಪಾಠ ‘ಅಮೃತ ಅಂಜನ್’

ಚಿತ್ರ: ಅಮೃತ ಅಂಜನ್
ನಿರ್ದೇಶನ: ಜ್ಯೋತಿ ರಾವ್ ಮೋಹಿತ್
ನಿರ್ಮಾಣ: ವಿಜಯ್ ಕುಮಾರ್
ತಾರಾ ಬಳಗ: ಸುಧಾಕರ್ ಗೌಡ, ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಶ್ರೀ ಭವ್ಯ, ನವೀನ್ ಡಿ ಪಡೀಲ್, ಇತರರು
ರೇಟಿಂಗ್: 3.5

ಮೋಜು, ಮಸ್ತಿ, ಕುಡಿತ, ಮೇಕಪ್, ದುಂದು ವೆಚ್ಚ ಈ ರೀತಿಯ ಯುವ ಜನಾಂಗದ ಜೀವನ ಶೈಲಿಯ ಬಗ್ಗೆ ಒಂದು ಸುಂದರವಾದ ಸಂದೇಶವನ್ನು ನೀಡುವ ಚಿತ್ರ ಈ ವಾರ ಬಿಡುಗಡೆ ಆಗಿರುವ ‘ಅಮೃತ ಅಂಜನ್ ‘.

ಚಿತ್ರದ ನಾಯಕ ಸುಧಾಕರ್ ಗೆ ಪಾಯಲ್ ಮೇಲೆ ಲವ್. ಅವಳಿಗೆ ಪಾರ್ಟಿ, ಮೋಜು, ಐಫೋನ್ ಚಟ.

ಇನ್ನು ಸುಧಾಕರ್ ಗೆಳೆಯ ಗೌರವ ಶೆಟ್ಟಿಗೆ ಕುಡಿತದ ಚಟ. ಅವನ ಪತ್ನಿ ಶ್ರೀ ಭವ್ಯಗೆ ಮೇಕಪ್ ಹುಚ್ಚು. ಈ ಎರಡು ವಿಷಯಕ್ಕೆ ಅವರಿಬ್ಬರ ನಡುವೆ ಮನಸ್ತಾಪ.

ಈ ರೀತಿ ಈ ಚಿತ್ರದ ಪಾತ್ರಗಳಲ್ಲಿ ಒಂದೊಂದು ದುರಭ್ಯಾಸ. ಇದರಿಂದ ಸಂಬಂಧಗಳಲ್ಲಿ, ಜೀವನದಲ್ಲಿ ಸಂತೋಷ ನೆಮ್ಮದಿ ಇಲ್ಲದ ಪರಿಸ್ಥಿತಿ.

ಯುವ ಜನಾಂಗಕ್ಕೆ ನಿರ್ದೇಶಕರು ಕುಡಿತ, ಮೋಜು, ಐಪೋನ್, ಮೇಕಪ್ ಇದರ ಆಚೆಗೆ ಬದುಕಿದೆ ಎನ್ನುವುದನ್ನು ತಿಳಿಸುವ ಯತ್ನವನ್ನು ಮಾಡಿದ್ದಾರೆ. ಪ್ರೀತಿ, ಮಾನವೀಯತೆ, ಸಂಬಂಧಗಳ ಪ್ರಾಮುಖ್ಯತೆ ಬಗ್ಗೆ ಸಂದೇಶ ನೀಡುವ ಯತ್ನವನ್ನು ಮಾಡಿದ್ದಾರೆ.

ಚಿತ್ರದಲ್ಲಿ ಸುಧಾಕರ್ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ. ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಪಾಯಲ್ ಚೆಂಗಪ್ಪ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗೌರವ ಶೆಟ್ಟಿ ಕುಡಿತದ ದಾಸನಾಗಿ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆಯುತ್ತಾರೆ. ಶ್ರೀ ಭವ್ಯ ಡೈಲಾಗ್ ಹೊಡೆಯುವುದರಲ್ಲಿ ಮಿಂಚಿದ್ದಾರೆ. ಚಿತ್ರದ ಉಳಿದ ಕಲಾವಿದರ ಅಭಿನಯ ಕೂಡಾ ಚೆನ್ನಾಗಿದೆ.

ಚಿತ್ರದ ಕ್ಲೈಮಾಕ್ಸ್ ಸಂದೇಶ ಅರ್ಥಪೂರ್ಣವಾಗಿದೆ. ಮನೋರಂಜನೆ ನೀಡುವ ಈ ಚಿತ್ರವನ್ನು ಎಲ್ಲರೂ ಒಂದು ಬಾರಿ ನೋಡುವಂತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!