ಕಳೆದ ತಿಂಗಳು ನಿಧನರಾದ ಅಂಬರೀಷ್ ಸಮಾಧಿಗೆ ಇಂದು ಸುಮಲತಾಅಂಬರೀಷ್, ಪುತ್ರ ಅಭಿಷೇಕ್‍ಅಂಬರೀಷ್ ವಿಶೇಷ ಪೂಜೆ ಸಲ್ಲಿಸಿ, ಅಭಿಮಾನಿಗಳಿಗೆ ಪುಳಿಯೋಗಿರೆ, ಲಡ್ಡು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ರಾಕ್‍ಲೈನ್‍ವೆಂಕಟೇಶ್, ದೊಡ್ಡಣ್ಣ ಮತ್ತು ಅಂಬರೀಷ್ ಅವರೊಂದಿಗೆ ಬಹುಕಾಲದಿಂದ ಸಹಾಯಕರಾಗಿರುವ ಸೀನ ಹಾಜರಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ರೇಸ್‍ಕೋರ್ಸ್ ರಸ್ತೆಯಲ್ಲಿರುವುದರಿಂದ ಇದಕ್ಕೆ ಅಂಬರೀಷ್ ಹೆಸರಿಡಬೇಕೆಂದು ಬಾ.ಮಾ.ಹರೀಶ್ ಚಿತ್ರರಂಗದ ಪರವಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಮೊನ್ನೆ ನಡೆದ ಪಾಲಿಕೆ ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಹಲವು ಸದಸ್ಯರು ನಗರದ ಯಾವುದಾದರೂ ರಸ್ತೆಗೆ ಅಂಬಿ ಹೆಸರನ್ನು ಇಡಲು ಬೇಡಿಕೆ ಇಟ್ಟಿದ್ದರು. ಅದರಂತೆ 27,28ರಂದು ಪಾಲಿಕೆ ಸಭೆಯಲ್ಲಿ ರೇಸ್‍ಕೋರ್ಸ್ ರಸ್ತೆಗೆ ಇವರ ಹೆಸರನ್ನು ಇಡಲು ನಿರ್ಣಯ ತೆಗೆದುಕೊಳ್ಳಲಾಗುವುದು ಎಂಬ ಮಾಹಿತಿ ಹೊರಬಂದಿದೆ.
Pingback: special info