ಅಂಬಿ ನಿಧನದ ಸುದ್ದಿ ಗೊತ್ತೇ ಇರಲಿಲ್ಲ ಹರ್ಷಿಕಾ!?

ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನಕ್ಕೆ ಇಡೀ ಕರ್ನಾಟಕ ಸೇರಿದಂತೆ ಹಿಂದಿ, ತೆಲುಗು, ಮಲಯಾಳಂ, ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಆದ್ರೆ ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ, ತನಗೆ ಅಂಬರೀಶ್​​ ನಿಧನದ ಸುದ್ದಿ ಗೊತ್ತೇ ಇರಲಿಲ್ಲ, ನಿನ್ನೆಯಷ್ಟೇ ತಿಳಿಯಿತು ಎಂದು ಟ್ವೀಟ್​ ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ರು. ಹೀಗಾಗಿ ಹರ್ಷಿಕಾ ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಟ್ವೀಟ್​ ಮಾಡಿದ್ದ ಹರ್ಷಿಕಾ, ಇಂದು ನನಗೆ ಅತ್ಯಂತ ದುಃಖದ ದಿನ. ನಾನು ಚಿತ್ರವೊಂದರ ಶೂಟಿಂಗ್​ನಲ್ಲಿದ್ದೆ. ಹೀಗಾಗಿ ನವೆಂಬರ್ 23 ರಿಂದ ನೆಟ್​ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ಈಗ ತಿಳಿಯಿತು. ನಾನು ಎಂಥ ದುರಾದೃಷ್ಟವಂತೆ, ನಾನು ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ಸಿಕ್ಕಿಲ್ಲ ಅಂತಾ ಹೇಳಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!