“ಫಾರ್ REGN”ಸಿನಿಮಾದ ಮುಹೂರ್ತ : ಕ್ಲಾಪ್ ಮಾಡಿದ್ರು ನಿಖಿಲ್ ಕುಮಾರಸ್ವಾಮಿ!

ನಿಶ್ಚಲ್ ಫಿಲಮ್ಸ್ ನಿರ್ಮಾಣದ,ನವೀನ್ ದ್ವಾರಕಾನಾಥ್ ನಿರ್ದೇಶನ; ನವೀನ್ ರಾವ್ ನಿರ್ಮಾಣ ಕ್ಲಾಪ್​ ಮಾಡಿ ಶುಭ ಹಾರೈಸಿದ ನಟ ನಿಖಿಲ್ ಕುಮಾರಸ್ವಾಮಿ ಬಾಲ್ಯದ ಸ್ನೇಹಿತರೇ ಒಂದಾಗಿ ಇದೀಗ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಈಗಾಗಲೇ ನೋದಂಣಿಯನ್ನೂ ಮಾಡಿಸಿದ್ದಾರೆ. ಅಂದರೆ ಚಿತ್ರದ ಹೆಸರೇ ಫಾರ್ ರಿಜಿಸ್ಟ್ರೇಷನ್ ಎಂದು ಹೆಸರಿಟ್ಟಿದ್ದಾರೆ. ಶುಭ ಶುಕ್ರವಾರದಂದು ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮುಗಿಸಿಕೊಂಡಿದೆ. ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ಮಾಡಿದರು.

ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ನವೀನ್ ರಾವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸಲಿದ್ದಾರೆ. ಅವರಿಗೆ ನಾಯಕಿಯಾಗಿ ಮಿಲನಾ ನಾಗರಾಜ್ ನಟಿಸಲಿದ್ದು, ಇನ್ನೇನು ಶೀಘ್ರದಲ್ಲಿ ಚಿತ್ರದ ಚಿತ್ರೀಕರಣವನ್ನೂ ಶುರು ಮಾಡಲಿದ್ದಾರೆ. ಚಿತ್ರದ ಬಗ್ಗೆ ಮೊದಲಿಗೆ ಮಾಹಿತಿ ನೀಡಿದ ನಿರ್ದೇಶಕ ನವೀನ್ ದ್ವಾರಕಾನಾಥ್, ಕಳೆದ ಹಲವು ವರ್ಷಗಳಿಂದ ಡ್ಯಾಕ್ಯುಮೆಂಟರಿಗಳನ್ನು ಮಾಡುತ್ತ ಬಂದಿದ್ದೆ. ನಾಟಕ, ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದೆ. ಅದರಲ್ಲೂ ಈ ಚಿತ್ರದ ನಿರ್ಮಾಪಕ ನವೀನ್ ರಾವ್ ನನ್ನ ಬಾಲ್ಹ ಸ್ನೇಹಿತ. ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಅದೇ ರೀತಿ ಇದೀಗ ಈ ಸಿನಿಮಾ ಸೆಟ್ಟೇರಿದೆ ಎಂದರು.
ಅಂದಹಾಗೆ, ಶೀರ್ಷಿಕೆಯ ಬಗ್ಗೆಯೂ ಮಾತನಾಡಿದ ನಿರ್ದೇಶಕರು, ಇತ್ತೀಚಿನ ದಿನಗಳಲ್ಲಿ ಏನೇ ಕೆಲಸ ಮಾಡಬೇಕೆಂದರೂ ನಾವು ಅದಕ್ಕೆ ಸಂಬಂಧಪಟ್ಟಂತೆ ನೋಂದಣಿ ಮಾಡಿಸಲೇಬೇಕು. ಇಲ್ಲಿಯೂ ಅದರ ಸುತ್ತ ಕಥೆ ಸಾಗಲಿದೆ. ಒಟ್ಟು 30 ದಿನಗಳ ಶೂಟಿಂಗ್ ಯೋಜನೆ ಇದ್ದು, ಸಕಲೇಶಪುರ, ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿಕೊಳ್ಳುವ ಪ್ಲಾನ್ ಇದೆ ಎಂದರು.ಚಿತ್ರದ ನಿರ್ಮಾಪಕ ನವೀನ್ ರಾವ್ ಮಾತನಾಡಿ, 2019ರ ಜನವರಿಯಲ್ಲಿ ಟೀ ಅಂಗಡಿ ಬಳಿ ನಾಣಿ ಅವರು ಸಿಕ್ಕರು. ಆವತ್ತೇ ಈ ಸಿನಿಮಾ ಬಗ್ಗೆ ಚರ್ಚೆ ಶುರುವಾಯ್ತು. ಅಂದಿನಿಂದ ನಮ್ಮ ಜತೆಗಿದ್ದಾರೆ. ಈ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ ಎಂದರು.

ಇನ್ನು ಚಿತ್ರದ ನಾಯಕ, ಪೃಥ್ವಿ ಅಂಬರ್ ಸಹ ಚಿತ್ರದ ಎಳೆಯನ್ನು ಬಿಚ್ಚಿಟ್ಟರು, ಇಲ್ಲಿ ಸಂಬಂಧಗಳ ಸುತ್ತ ಸಿನಿಮಾ ಮಾಡಲಾಗುತ್ತಿದೆ. ರಿಜಿಸ್ಟರ್ ಆಗದ ಸಂಬಂಧಗಳು ಹೇಗಿರುತ್ತವೆ, ಅವನ್ನು ಒಂದು ಮಾಡುವುದು ಹೇಗೆ ಎಂಬಿತ್ಯಾದಿ ಅಂಶಗಳು ಸಿನಿಮಾದಲ್ಲಿರಲಿದೆ. ತುಳು ಸಿನಿಮಾ ನೋಡಿ ಭೇಟಿ ಮಾಡಿ ಒಂದೆಳೆ ಹೇಳಿದ್ದರು ಎಂದರು ಪೃಥ್ವಿ. ಅದೇ ರೀತಿ ನಾಯಕಿಯಾಗಿ ನಟಿಸಲಿರುವ ಮಿಲನಾ ಮಾತನಾಡಿ, ಶೀರ್ಷಿಕೆ ಕೇಳಿಯೇ ಸಿನಿಮಾ ಇಷ್ಟವಾಯ್ತು. ಸದ್ಯದ ಜನರೇಷನ್ಗೆ ಕಥೆ ಹೊಂದಿಕೆ ಆಗುತ್ತದೆ. ಇಡೀ ತಂಡವೂ ಒಂದು ರೀತಿ ಕಾರ್ಪೋರೇಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಚಿತ್ರದ ಭಾಗವಾಗುವುದಕ್ಕೆ ಖುಷಿ ಇದೆ ಎಂದರು.
ಸಂಭಾಷಣೆ ಬರೆಯುವುದರ ಜತೆಗೆ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ಮಾಡುತ್ತಿರುವ ತಬಲಾ ನಾಣಿ ಸಹ ಚಿತ್ರದ ಬಗ್ಗೆ ಮತ್ತು ತಂಡದ ಬಗ್ಗೆ ಮಾತನಾಡಿದರು. ಇನ್ನುಳಿದಂತೆ ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ರಾಘು ರಾಮನಕೊಪ್ಪ ಸೇರಿ ಹಲವು ಖ್ಯಾತ ನಾಂ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ವಿಶೇಷತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು.ಚಿತ್ರಕ್ಕೆ ವಿವೇಕ್ ಛಾಯಾಗ್ರಹಣ ಮಾಡುತ್ತಿದ್ದು, ಈ ಮೊದಲು ಕಿರುಚಿತ್ರ ಮಾಡಿದ ಅನುಭವ ಅವರಿಗಿದೆ. ಇದು ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ. ಹರೀಶ್ ಸಂಗೀತ ಸಂಯೋಜನೆಯ ಜವಾಭ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಅವರಿಗೂ ಇದು ಮೊದಲ ಸಿನಿಮಾ. ಚೇತನ್ ಕುಮಾರ್, ಕವಿರಾಜ್ ನಾಗಾರ್ಜುನ್ ಶರ್ಮಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇರ್ಮಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!