ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್ನ(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ.
ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ. ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ.
ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ.
ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್ ಕೇವಲ 19 ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ.
ಜೀ಼ ಕನ್ನಡ ವಾಹಿನಿಯ ಖ್ಯಾತ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ ಮನೆ ಮನ ಗೆದ್ದ ರಿಯಾಲಿಟಿ ಶೋ. ಮೋಸ್ಟ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಈ ಶೋವನ್ನು ಹೋಸ್ಟ್ ಮಾಡುತ್ತಿದ್ದು, ಇದಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಬಂತು ಅಂದ್ರೆ ಸಾಕು ಕರ್ನಾಟಕದ ಬಹುತೇಕ ಮನೆಗಳಲ್ಲಿ ಕಣ್ಣಾಲಿಗಳು ಒದ್ದೆಯಾಗ್ತಿದ್ವು.
ಮುಖದಲ್ಲಿ ಕಿರುನಗೆಯೊಂದು ಮೂಡುತ್ತಿತ್ತು. ಸಾಧನೆ ಮೆಟ್ಟಿಲೇರಬೇಕೆನ್ನೋ ಆಶಯವನ್ನೊತ್ತ ಅನೇಕರಿಗೆ ಸ್ಪೂರ್ತಿ ಸಿಗುತ್ತಿದ್ದಿದ್ದೇ ವಾರಾಂತ್ಯಕ್ಕೆ. ಅಷ್ಟರ ಮಟ್ಟಿಗೆ ಜನರ ಮನಸಿನ ಮೇಲೆ ಪ್ರಭಾವ ಬೀರ್ತಿದ್ದ ಕಾರ್ಯಕ್ರಮವೇ ವೀಕೆಂಡ್ ವಿಥ್ ರಮೇಶ್. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸ್ಪೂರ್ತಿದಾಯಕ ಕಥೆಯನ್ನು ಕರುನಾಡ ಮುಂದೆ ತೆರೆದಿಟ್ಟ ವಿಕೆಂಡ್ ವಿತ್ ರಮೇಶ್ ಸೂಪರ್ ಸಂಚಿಕೆ ಮತ್ತೊಮ್ಮೆ ನಿಮಗಾಗಿ.
ಅಭಿನಯ ಚಕ್ರವರ್ತಿ, ಚಂದನವನದ ಪೈಲ್ವಾನ್ ಅಂತ ಕರೆಸಿಕೊಳ್ಳುವ ಕಿಚ್ಚ ಸುದೀಪ್ ತಮ್ಮ ಆರಂಭದ ದಿನಗಳಲ್ಲಿ ಪಟ್ಟ ಕಷ್ಟ ಮಾತ್ರ ಹೇಳತೀರದು, ಕಿಚ್ಚನ ನೆನಪಿನ ಆಟೋಗ್ರಾಫ್ ಮಾತ್ರ ಸುಪರ್.ತಮ್ಮ ಜೀವನದ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಹೇಳಿಕೊಂಡಿಲ್ಲಾ, ಆದ್ರೆ ಜೀ಼ ಕನ್ನಡ ವಾಹಿನಿಯ ಪ್ರಸಿದ್ಧ ಶೋ ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ಸುದೀಪ್ ತಮ್ಮ ಜೀವನದ ಖುಷಿಯ ಕ್ಷಣಗಳನ್ನ ನೆನೆದು ಖುಷಿ ಪಟ್ರು, ಹಾಗೆ ತಮ್ಮ ಕಡು ಕಷ್ಟದ ದಿನಗಳನ್ನ ನೆನೆದು ಭಾವುಕರಾಗಿದ್ರು ಮೊದಲ ಸಿನಿಮಾ ರಿಲೀಸ್ ಬಗ್ಗೆ ಹಾಗೆ ಹುಚ್ಚ ಸಿನಿಮಾದ ಮೇಗಾ ಹಿಟ್ ಬಗ್ಗೆ, ಕೆಲ ಸಿನಿಮಾಗಳು ಸೋತಾಗ ಚಿತ್ರರಂಗ ಅವ್ರನ್ನ ಐರನ್ ಲೆಗ್ ಅಂದಿದ್ದರ ಬಗ್ಗೆ ವಿವರಸಿ ಹೇಳಿದ್ರು, ತಮ್ಮ ಹಳೆಯ ಗೆಳೆಯರನ್ನ ನೋಡಿ ಖುಷಿ ಪಟ್ಟಿದ್ರು ಕಿಚ್ಚನ ಜೀವನದ ಆಟೋಗ್ರಾಫ್ ನೋಡುವ ಸುವರ್ಣಾವಕಾಶ ಈಗ ನಿಮ್ಮದಾಗಿದೆ. ಭಾನುವಾರ ಮಧ್ಯಾಹ್ನ,ಸುದೀಪ್ ಭಾಗವಹಿಸಿದ್ದ ವೀಕೆಂಡ್ ವಿಥ್ ರಮೇಶ್ ಎಪಿಸೋಡ್ ಜೀ಼ ಕನ್ನಡ ವಾಹಿನಿ ಮರು ಪ್ರಸಾರ ಮಾಡಲಿದೆ.
46 ವರ್ಷಗಳ ಬಣ್ಣದ ಬದುಕಿನಲ್ಲಿ, 250 ಚಿತ್ರಗಳಲ್ಲಿ ಅಭಿನಯ. ‘ನಾಗರಹಾವು’ ಚಿತ್ರದ ಖಳನಾಯಕನ ಪಾತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ(ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಪ್ರತಿಭೆ) ‘ಅಂತ’ ಚಿತ್ರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ. ಇದು ಅಭಿಮಾನಿಗಳ ಮನೆಸೆಳೆದ ಪಾತ್ರ. ‘ಚಕ್ರವ್ಯೂಹ’ದಂಥ ಚಿತ್ರಗಳ ಮೂಲಕ ರೆಬಲ್ ಸ್ಟಾರ್ ಎಂಬ ಬಿರುದು ಪಡೆದವರು.
ಭ್ರಷ್ಟ ರಾಜಕೀಯ ವ್ಯವಸ್ಥೆ ವಿರುದ್ಧ ತಮ್ಮ ಚಿತ್ರಗಳಲ್ಲಿ ಸಮರ ಸಾರಿದವರು, ಅಂಬರೀಷ್. ಚಕ್ರವ್ಯೂಹ, ಅಂತ, ಅಂತ(ಭಾಗ-2), ನ್ಯೂಡೆಲ್ಲಿ, ಏಳು ಸುತ್ತಿನ ಕೋಟೆ, ರಂಗನಾಯಕಿ, ಟೋಣಿ, ರಾಣಿ ಮಹಾರಾಣಿ, ಮಣ್ಣಿನ ದೋಣಿ, ಮುಂಜಾನೆ ಮಂಜು, ಒಡಹುಟ್ಟಿದವರು(ರಾಜ್ ಕುಮಾರ್ ಸಹೋದರನಾಗಿ ಅಭಿನಯ) ಮತ್ತಿತರ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ.
ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ ಅಂಬಿ ಎಂದರೇ ಎಲ್ಲರಿಗೂ ಪ್ರಾಣ.ಕನ್ನಡ ಚಿತ್ರರಂಗದ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಅವರು ಇಂದು ನಮ್ಮೋಂದಿಗಿಲ್ಲಾ.ಮಳವಳ್ಳಿ ಹುಚ್ಚೇ ಗೌಡ ಅಮರನಾಥ್ ಅಂಬರೀಶ್ ಆದ ರೋಮಾಂಚಕ ಕಥೆಯನ್ನ ಇದೇ ಶನಿವಾರ ವಿಕೆಂಡ್ ವಿತ್ ರಮೇಶ್ ಶೋನ ಮರುಪ್ರಸಾರದಲ್ಲಿ ನೋಡಿ ನಿಮ್ಮ ಲಾಕ್ ಡೌನ್ ಸಮಯವನ್ನ ಎಂಜಾಯ್ ಮಾಡಿಏಪ್ರಿಲ್ 18 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ರೆಬಲ್ ಸ್ಟಾರ್ ಅಂಬರೀಶ್ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಕಿಚ್ಚ ಸುದೀಪ್ ಎಪಿಸೋಡ್ ಪ್ರಸಾರವಾಗಲಿದೆ.
ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.
Be the first to comment